ಇದೇ ಮೊದಲ ಬಾರಿಗೆ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾರ್ವಜನಿಕ ಶಾಲೆಗಳಿಗೆ ದೀಪಾವಳಿ ಹಬ್ಬಕ್ಕೆ ಅಧಿಕೃತ ರಜೆ ನೀಡಲಾಗಿದೆ. ಈ ಮೂಲಕ ಸ್ಥಳೀಯ 11 ಲಕ್ಷ ವಿದ್ಯಾರ್ಥಿಗಳಿಗೆ ಬೆಳಕಿನ ಹಬ್ಬ ಆಚರಣೆಗೆ ಅನುವು ಮಾಡಿಕೊಡಲಾಗಿದೆ. ನಗರದ ಗವರ್ನರ್ ಕ್ಯಾಥಿ ಹೋಚುಲ್ ಅವರು ಈ ಆದೇಶಕ್ಕೆ ಸಹಿ ಮಾಡಿದ್ದಾರೆ. ನವೆಂಬರ್ 1ರಂದು ಶಾಲೆಗಳು ಮುಚ್ಚಿರುತ್ತವೆ.
ನಗರದ ಮೇಯರ್ ಕಚೇರಿ ವಿದೇಶಾಂಗ ವ್ಯವಹಾರ ವಿಭಾಗದ ಉಪ ಆಯುಕ್ತ ದಿಲೀಪ್ ಚೌಹಾಣ್ ಅವರು ‘ದೀಪಾವಳಿ ಅಧಿಕೃತ ಶಾಲಾ ರಜೆಯಾಗಿ ಇದೇ ಮೊದಲ ಬಾರಿ ಆಚರಿಸಲಾಗುತ್ತಿದೆ. ಇದು ನಗರ ವೈವಿಧ್ಯತೆ, ಸಮುದಾಯ ಹಾಗೂ ನಾಯಕರ ಶ್ರಮದ ಮೈಲುಗಲ್ಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೀಪಾವಳಿಗೂ ಸೇಲ್ ಆಗಿಲ್ಲ ಕಾರ್ಗಳು..!