ಕಾಂಗ್ರೆಸ್ ನಾಯಕರು ನನ್ನನ್ನ ಹೊರಗಿನವರು ಅಂತಾರೆ, ನನಗೆ ಇವಾಗ 36 ವರ್ಷ ವಯಸ್ಸು. ನಾನು ಹುಟ್ಟಿದ ಐದು ವರ್ಷದ ಹಿಂದಿನಿಂದಲೂ ದೇವೇಗೌಡರು ಮತ್ತು ಕುಮಾರಣ್ಣರ ಸಂಬಂಧ ಚನ್ನಪಟ್ಟಣಕ್ಕೆ ಇದೆ. ದೇವೇಗೌಡರ ಇಗ್ಗಲೂರು ಡ್ಯಾಂನ ಕೊಡುಗೆಯಿಂದ ಜನ ನನ್ನನ್ನ ಪ್ರೀತಿಯಿಂದ ಹರಸುತ್ತಿದ್ದಾರೆ. ಕ್ಷೇತ್ರ ಮತ್ತು ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು ದೇವೇಗೌಡರು ಅಂತಾರೆ. ಇನ್ನು ಕುಮಾರಣ್ಣರ ಸಾಲಮನ್ನಾ ಯೋಜನೆಯನ್ನ ಸ್ಮರಿಸಸುತ್ತಿದ್ದಾರೆ ಎಂದರು.
ಪ್ರಾಮಾಣಿಕವಾಗಿ ಕೆಲಸ ಮಾಡಲು ಬಂದಿದ್ದೇನೆ
ರಾಜ್ಯದ ನಾನಾ ಮೂಲೆಗಳಿಂದ ಎರಡೂ ಪಕ್ಷದ ಕಾರ್ಯಕರ್ತರ ದಂಡು ಬಂದು ಪ್ರಚಾರ ಮಾಡ್ತಿದ್ದಾರೆ.ಮೂರನೇ ಬಾರಿ ಯುವಕ ನಿಖಿಲ್ ಗೆ ತೊಂದರೆ ಆಗಬಾರದು ಅಂತ. ನಾನು ಎರಡು ಚುನಾವಣೆಗಳನ್ನ ಫೇಸ್ ಮಾಡಿದ್ದೇನೆ. ಎರಡು ಚುನಾವಣೆಗಳ ಸೋಲಿನ ಕಹಿ ನನಗೆ ನೋವುಗಳಿವೆ. ರಾಮನಗರ ಚುನಾವಣೆಯಲ್ಲಿ ಏನಾಯ್ತು ಅಂತಾ ನಿಮಗೆ ಗೊತ್ತಿದೆ. ಇಲ್ಲಿ ನಾನು ಜನಪ್ರತಿನಿಧಿ ಆಗಬೇಕೆಂದು ನಾನು ಬಂದಿಲ್ಲ. ನಮ್ಮ ಮನೆಗೆ ಬರುವ ಎಲ್ಲಾ ವರ್ಗದವರಿಗೂ ಪ್ರಾಮಾಣಿಕ ಕೆಲಸ ಮಾಡ್ತ ಬಂದಿದ್ದೇವೆ ಎಂದು ತಿಳಿಸಿದರು.
ದೇವೇಗೌಡರು, ಕುಮಾರಣ್ಣರ ದಾರಿ ಯಲ್ಲೇ ಸಾಗುತ್ತಿದ್ದೇನೆ.
ಅದೇ ನಿಟ್ಟಿನಲ್ಲಿ ನನ್ನ ಮೇಲೆ ಹೆಚ್ಚಿನ ವಿಶ್ವಾಸವನ್ನ ಜನ ಇಟ್ಟಿದ್ದಾರೆ.ನಿರುದ್ಯೋಗ ಸಮಸ್ಯೆ ನಿವಾರಿಸಲು ಕುಮಾರಣ್ಣನ ನೇತೃತ್ವದಲ್ಲಿ ಮಂಡ್ಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. 158 ಕಂಪನಿ ಕರೆತಂದು ಸುಮಾರು 1200 ಜನಕ್ಕೆ ಉದ್ಯೋಗ ಕೊಡಿಸಿದ್ದು ಕುಮಾರಣ್ಣ ಎಂದು ನಿಖಿಲ್ ಅವರು ತಿಳಿಸಿದರು.
ನಾನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬವನ್ನ ನೋಡಿದ್ದೇವೆ. ಅಂತವರಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕು ಅನ್ನೋದು ಕುಮಾರಣ್ಣರ ಕನಸು. ಮಂಡ್ಯ-ರಾಮನಗರ ನಡುವೆ ದೊಡ್ಡ ಕಾರ್ಖಾನೆ ತರಲು ಹೆಚ್ಡಿಕೆ ನಿರ್ಧಾರ ಮಾಡಿದ್ದಾರೆ. ನೀವು ತುಂಬಿದ ರಾಜಕೀಯ ಶಕ್ತಿಯನ್ನ ವಾಪಸ್ಸು ಕೊಡಲು ಕುಮಾರಣ್ಣ ಅವರು ದೃಢ ನಿರ್ಧಾರ ಮಾಡಿದ್ದಾರೆ ಎಂದರು.
ನಾವು ಪ್ರಚಾರ ಪ್ರಿಯರಲ್ಲ
ಚನ್ನಪಟ್ಟಣ ಕ್ಷೇತ್ರಕ್ಕೆ ಒಂದೂವರೆ ಸಾವಿರ ಕೋಟಿಯಷ್ಟು ಅನುದಾನ ತಂದಿದ್ದು ಕುಮಾರಣ್ಣ ಅವರು, ಎಂದಿಗೂ ನಮ್ಮ ಕುಟುಂಬ ಪ್ರಚಾರ ಪಡೆಯಲಿಲ್ಲ. ವಿರೋಧಿಗಳು ಹೇಳ್ತಾರೆ ಎಲ್ಲಿ ನಿಮ್ಮ ಕುಮಾರಣ್ಣ ಏನು ಮಾಡಿದ್ರು ಅಂತಾರೆ. ಪ್ರತಿ ಹಳ್ಳಿಗಳಲ್ಲಿ ಸಿಸಿ ರಸ್ತೆ ಮಾಡಿದ್ದಾರೆ. ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಮಾಡ್ತಿದ್ದಾರೆ. ಮಾವು ಶೇಖರಣ ಘಟಕ ಮಾಡ್ತಿದ್ದಾರೆ. ಎಷ್ಟು ಕೆರೆಗಳನ್ನ ತುಂಬಿಸಿದ್ದೀರಿ ಅಂತಾರೆ. ಎಲ್ಲದಕ್ಕೂ ದಾಖಲೆಗಳಿವೆ ಎಂದರು.
ಬೂಟಾಟಿಕೆಗೆ ಇಲ್ಲಸಲ್ಲದ ಆರೋಪ ಮಾಡಬಾರದು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.ನಾವು 107 ಕೆರೆ ತುಂಬಿಸಿದ್ದೇವೆ. ಅದನ್ನ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ಅಭಿರುದ್ದಿ ಮಾಡಿ ಜನರ ಬಳಿ ಹೋಗುತ್ತೇವೆ. 40 ವರ್ಷದಿಂದ ನೀವು ನಮ್ಮ ಕುಟುಂಬವನ್ನ ಬೆಳೆಸಿದ್ದೀರಿ.
ನಾನು ಕನ್ನಡಿಗ, ನಾವು ಹಾಸನದವರು ನಿಜ ಅದನ್ನ ಒಪ್ಪಿಕೊಳ್ತೇನೆ.ಮೊದಲು ಈ ನಾಡಿನಲ್ಲಿ ಹುಟ್ಟಿರೋದ್ರಿಂದ ನಾವು ಮೊದಲು ಕನ್ನಡಿಗ ಎಂದು ಡಿಕೆ ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದರು.
ಕೈ ಮುಗಿದು ಭಾವುಕರಾದ ನಿಖಿಲ್
ಅಭಿಮನ್ಯು ಪಾತ್ರ ಮಾಡಿದ್ದಾರೆ. ಆತನಿಗೆ ಹಣೆಬರಹ, ಅದೃಷ್ಟ ಇಲ್ಲ ಅಂತಾರೆ. ನನ್ನ ಹಣೆಬರಹ ಬರೆಯುವವರು ಕ್ಷೇತ್ರದ ಜನ. ನಾನು ಮಂಡ್ಯದಲ್ಲಿ ಸೋತಿದ್ದೇನೆ. ಜಿಲ್ಲೆಯ ಜನ ನನಗೆ ಹೆಚ್ಚಿನ ಮತ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ನನ್ನ ಕಣ್ಣೀರಿನ ಬಗ್ಗೆ ಬಹಳ ಜನ ವ್ಯಂಗ್ಯ ಮಾಡ್ತಾರೆ. ಮನುಷ್ಯತ್ವ, ಭಾವನಾತ್ಮಕ ಮನೋಭಾವ ಇರುವವರಿಗೆ ಮಾತ್ರ ಕಣ್ಣೀರು ಬರೋದು. ಕಟುಕರಿಗೆ ಕಣ್ಣೀರು ಬರುವುದಿಲ್ಲ. ನಾನು ಸಾಕಷ್ಟು ಸಲ ಸಹಿಸಿಕೊಂಡಿದ್ದೇನೆ ಎಂದು ಭಾವನಾತ್ಮಕವಾಗಿ ಹೇಳಿದರು.
ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ!