ಕೈ ಜೋಡಿಸಿ ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ತಿದ್ದೇನೆ. ಒಂದೇ ಒಂದು ಅವಕಾಶ ಕೊಡಿ ಎಂದು ಚಿನ್ನಪಟ್ಟಣ ಕ್ಷೇತ್ರದ ಜನತೆ ಮುಂದೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೇಡಿಕೊಂಡರು.
ಉಪಚುನಾವಣೆ ಹಿನ್ನೆಲೆ ಮಾಕಳಿ ಗ್ರಾಮದ ಪ್ರಚಾರದಲ್ಲಿ ನಿಖಿಲ್, ಕುಮಾರಣ್ಣನ ನಾಯಕತ್ವಕ್ಕೆ ಇದು ಅಗ್ನಿ ಪರೀಕ್ಷೆ. ಇಲ್ಲಿ ನಿಖಿಲ್ ಪ್ರಶ್ನೆ ಅಲ್ಲ. ಎಲ್ಲವೂ ನಿಮ್ಮ ಕೈಯಲ್ಲಿದೆ. ಕೈ ಜೋಡಿಸಿ ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ತಿದ್ದೇನೆ. ಒಂದೇ ಒಂದು ಅವಕಾಶ ಕೊಡಿ. ದೇವೇಗೌಡರು, ಕುಮಾರಣ್ಣ ಅವ್ರು ಕೆಲಸ ಮಾಡಿದ್ದಾರೆ. ನನ್ನ ಕೊನೆ ಉಸಿರಿರೋವರೆಗೂ ನಿಮ್ಮ ಜೊತೆ ಇರ್ತೇನೆ. ಒಂದು ಅವಕಾಶ ಕೊಡಿ. ಈ ಜಿಲ್ಲೆಯಲ್ಲಿ ನಾವು ಹುಟ್ಟದೇ ಇರಬಹುದು. ಈ ಜಿಲ್ಲೆಗೆ ಹಲವಾರು ವರ್ಷದ ನಂಟಿದೆ. ದೇವೇಗೌಡರು ಇಗ್ಗಲೂರು ಬ್ಯಾರೇಜ್ ಕಟ್ಟದೆ ಹೋದ್ರೆ ಎಲ್ಲಿ ಕೆರೆಗೆ ನೀರು ತುಂಬಿಸುತ್ತಿದ್ದರು? ಗೋಲಿಬಾರ್ ಆಗಿ ಇಬ್ರು ತೀರಿಕೊಂಡ್ರು. ನಾನು ಆಗ ಚಿಕ್ಕ ಹುಡುಗ, ದೇವೇಗೌಡರು ಪಾಠ ಮಾಡಿದ್ದಾರೆ ಎಂದು ನೆನಪಿಸಿಕೊಂಡರು.
ಕುಮಾರಸ್ವಾಮಿ ದೇವೇಗೌಡರು ಕಣ್ಣಲ್ಲಿ ನೀರಾಕ್ತಾರೆ ಮರಳಾಗಬೇಡಿ ಅಂತಾರೆ. ಅವ್ರು ಕಣ್ಣೀರಾಕೋದು ನನಗಾಗಿ ಅಲ್ಲ. ರೈತರ ಪರವಾಗಿ, ನಾಡಿನ ಜನರು ನೋವಿನಲ್ಲಿದ್ದಾಗ ಕಣ್ಣಲ್ಲಿ ನೀರಾಕಿದ್ದಾರೆ. ಅದನ್ನ ಹೊರತುಪಡಿಸಿ ಅವರು ನನಗಾಗಿ ಕಣ್ಣೀರು ಹಾಕಲಿಲ್ಲ. ನನಗೆ ಆತ್ಮವಿಶ್ವಾಸ ತುಂಬಿ ದೇವೇಗೌಡ್ರು ಕಳುಹಿಸಿದ್ದಾರೆ. ನಿಮ್ಮ ಸಹಕಾರ ಇರಲಿ ಎಂದು ಜನತೆಯಲ್ಲಿ ಕೇಳಿಕೊಂಡರು.
ಕುಮಾರಸ್ವಾಮಿ ಅವ್ರನ್ನ ಎರಡು ಬಾರಿ ಆಯ್ಕೆ ಮಾಡಿದ್ದೀರಿ. ಕುಮಾರಣ್ಣ ಅವ್ರು ಬಡವರ, ದಲಿತರ, ಯುವಕರು, ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಕುಮಾರಣ್ಣರನ್ನು ಮುಖ್ಯಮಂತ್ರಿ ಮಾಡಿದ ಕೀರ್ತಿ ಚನ್ನಪಟ್ಟಣ ಜನತೆಗೆ ಸೇರಬೇಕು. ಮಂಡ್ಯದಲ್ಲಿ ಕುಮಾರಣ್ಣ ಲೋಕಸಭೆ ಗೆದ್ದಮೇಲೆ ತೆರವಾಗಿದೆ. ನಿನ್ನೆ ಬಿಜೆಪಿ ನಾಯಕರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಈಗ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿರುವ ವ್ಯಕ್ತಿ, ಚುನಾವಣೆಯಲ್ಲಿ ನಿಲ್ಲಬೇಕು ಅಂತಾ ಕೇಳಿದ್ರು. ಆಗ ಕುಮಾರಣ್ಣ, ಮೊದಲು ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ರಾಷ್ಟ್ರೀಯ ನಾಯಕರ ಜೊತೆ ಹೋಗಿ ಮಾತಾಡೋಣ ಅಂದಿದ್ರು. ಅದಾದ ನಂತರ ಬೆಳವಣಿಗೆ ನೀವೆ ನೋಡಿದ್ದೀರಿ. ಬೆಂಗಳೂರು ಖಾಸಗಿ ಹೋಟೆಲ್ನಲ್ಲಿ ಅವರ ಜೊತೆ ಚರ್ಚೆ ಮಾಡಿದ್ವಿ. ಜೆಡಿಎಸ್ ಸಾಂಪ್ರದಾಯಿಕ ಮತಗಳಿವೆ, ಜೆಡಿಎಸ್ನಿಂದ ನಿಂತ್ಕೊಳ್ಳಿ ಅಂತಾ ನಮ್ಮ ನಾಯಕರು ಹೇಳಿದ್ರು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ರೂ ನಮ್ಮ ನಾಯಕರು ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಅಂತಾ ಕೇಳಿದ್ರು. ಆದಾದ ಮೇಲೆ ಏನೆಲ್ಲ ಮಾತಾಡಿದ್ರು ನೋಡಿದ್ದೀರಿ. ಏನೇ ನೋವಿದ್ರು ಸಹಿಸ್ಕೊಂಡ್ವಿ. ತರಾತರಿಯಲ್ಲಿ ರಾಜೀನಾಮೆ ಕೊಟ್ಟು ಹೋಗಿ ಕಾಂಗ್ರೆಸ್ ಸೇರಿಕೊಂಡರು ಎಂದು ತಿಳಿಸಿದರು.
ಬಿಜೆಪಿ ಅಷ್ಟೆಲ್ಲ ಸ್ಥಾನ ಕೊಟ್ಟಿದ್ರು ಹೋದ್ರು. ಅವ್ರು ಯಾವ ಪಕ್ಷದಲ್ಲೂ ಉಳಿದುಕೊಳ್ಳಲ್ಲ. ಡಿ.ಕೆ.ಶಿವಕುಮಾರ್ ಮಾತು ಬಹಳ ಬೇಸರ ಆಗಿದೆ. ಹಿಂದೆ ದೇವೇಗೌಡರಿಗೆ ಮೋಸಮಾಡಿ ನಮ್ಮ ಪಕ್ಷದ ಕಾರ್ಯಕರ್ತರು ನಿಮ್ಮನ್ನ ಸಂಸದರಾಗಿ ಮಾಡಿದ್ರು. ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದುಕೊAಡಿರಲಿಲ್ಲ. ರಾಜ್ಯದಲ್ಲಿ ಸಭೆ ಮಾಡಿ ಸಂಘಟನೆ ಮಾಡ್ತಿದ್ದೆ. ಈಗ ಒಬ್ಬ ವ್ಯಕ್ತಿ ತೆಗೆದುಕೊಂಡ ತೀರ್ಮಾನ, ಇಡಿ ಸಚಿವ ಸಂಪುಟ ಇಲ್ಲಿ ಬೀಡು ಬಿಟ್ಟಿದ್ದರಿಂದ ಕಾರ್ಯಕರ್ತ ಒತ್ತಾಯ ಮಾಡಿದ್ರು. ರಾಮನಗರ, ಮಂಡ್ಯ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ರಾಮನಗರದಲ್ಲಿ ಕೂಪನ್ ಕಾರ್ಡ್ ಕೊಟ್ಟಿದ್ರು. ಅದಕ್ಕೆ ಉತ್ತರ ಕೊಡಬೇಕಲ್ವಾ? ನಾವು ಕುತಂತ್ರ ಮಾಡಿ ರಾಜಕಾರಣ ಮಾಡಿದವರಲ್ಲ ಎಂದು ಮಾತನಾಡಿದರು.