ಖ್ಯಾತ ಗಾಯಕ ಚಂದನ್ ಶೆಟ್ಟಿ ಅವರ ಮಾಜಿ ಪತ್ನಿಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಈ ಹಿಂದೆ ಚಂದನ್ ಶೆಟ್ಟಿ ಜೊತೆ ಕಲರ್ಸ್ ಕನ್ನಡದಲ್ಲಿ ಬರುವ ʻರಾಜ ರಾಣಿ ́ ಎಂಬ ಶೋ ಇಂದ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಆ ಶೊ ಮುಗಿದ ನಂತರ ನಿವೇದಿತಾ ಗೌಡ ʻಗಿಚ್ಚಿ ಗಿಲಿ ಗಿಲಿ ́ ಶೋ ನಲ್ಲೂ ಕೂಡ ಭಾಗವಹಿಸಿ ತಮ್ಮ ನಟನೆಯ ಕೌಶಲ್ಯತೆಯನ್ನು ಕನ್ನಡಿಗರಿಗೆ ಪರಿಚಯಿಸಿದ್ದರು, ಆದರೆ ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಆದ ನಂತರ ಯಾವುದೇ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಹಾಗೆಯೇ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಅದೇ ರೀತಿ ಈಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವೀಡಿಯೋ ಹಂಚಿಕೊಳ್ಳುವುದ ಮೂಲಕ ಮತ್ತೆ ಸದ್ದಿಯಲ್ಲಿದ್ದಾರೆ. ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯ ಜೀವನ ಫುಲ್ಸ್ಟಾಪ್ ಇಟ್ಟ ಕೂಡಲೇ ದಿನೇ ದಿನೇ ತಮ್ಮ ಮೈಮಾಟ ತೋರಿಸುತ್ತಾ ನೃತ್ಯ ಮಾಡುತ್ತಾ ವೀಡಿಯೋ ಹರಿಬಿಡುತ್ತಿದ್ದರು. ಅಂತೆಯೇ ಕ್ರಿಸ್ಮಸ್ ಮತ್ತು ನ್ಯೂಇಯರ್ ಸೆಲೆಬ್ರೇಟ್ ಮಾಡುವುದಕ್ಕಾಗಿ ಒಂದು ಹುಡುಗನ ಜೊತೆ ಥೈಲಾಂಡ್ ಗೆ ಹೋಗಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಇದೀಗ ಆ ಯುವಕನ ಜೊತೆ ಆಕಾಶಬುಟ್ಟಿಯನ್ನು ಹಾರಿಬಿಟ್ಟಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ, ಆಕಾಶಬುಟ್ಟಿಯನ್ನು ಬಿಡುವಂತೆ ಕೆಲವು ಕಡೆಗಳಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಆಕಾಶ ಬುಟ್ಟಿಯನ್ನು ಹಾರಿ ಬಿಡುವ ಸಂಪ್ರದಾಯವಿದೆ. ಅದೇ ರೀತಿ, ನಿವೇದಿತಾ ಕೂಡ ಆಕಾಶಬುಟ್ಟಿಯನ್ನು ಹಾರಿಬಿಟ್ಟಿದ್ದಾರೆ. ಅವರ ಜೊತೆ ಇರುವ ಯುವಕ ಕೂಡ ವಿಷ್ ಮಾಡಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋ ಅನ್ನು ನಿವೇದಿತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಜೈ ಮದ್ದಳೇನ ಎನ್ನುವವರಿಗೆ ನಿವೇದಿತಾ ಟ್ಯಾಗ್ ಮಾಡಿದ್ದಾರೆ, ಇದು ಆ ಯುವಕನ ಪ್ರೊಫೈಲ್ ಆಗಿದೆ. ಈ ಹೊಸ ಯುವಕನ ಜೊತೆ ಹೊಸ ವಿಷ್ ಮಾಡಿರುವುದಾಗಿ ಕ್ಯಾಪ್ಷನ್ ಮೂಲಕ ಕಂಡುಕೊಂಡಿರುವ ಅಭಿಮಾನಿಗಳು, ಆ ಯುವಕ ಯಾರು ಎಂದು ತಲೆಗೆ ಹುಳುಬಿಟ್ಟುಕೊಂಡಿದ್ದಾರೆ. ಇದಕ್ಕೆ ಈ ಹೊಸ ಹುಡುಗ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ನಿವೇದಿತಾ ಗೌಡ ಯಾವುದೇ ಪ್ರತಿಕ್ರಿಯೆ ನೀಡದೆ ಇರುವ ಕಾರಣದಿಂದ ಅಭಿಮಾನಿಗಳಿಗೆ ಇನ್ನೂ ಗೊಂದಲ ಹೆಚ್ಚಾಗಿದೆ.