ಬಿರಿಯಾನಿ .. ಈ ಹೆಸರು ಕೇಳಿದರೆ ಸಾಕು ಸಾಕಷ್ಟು ನಾನ್ವೆಜ್ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿ ಎಂಬುದು ಕೇವಲ ಖಾದ್ಯವಲ್ಲ. ಅದೊಂದು ಭಾವನೆ, ಅದೊಂದು ರೀತಿಯ ಪ್ರೀತಿ, ಅದೊಂದು ರೀತಿಯ ಆತ್ಮೀಯತೆ. ಹೀಗೆ ಒಬ್ಬಬ್ಬರಿಗೆ ಒಂದೊಂದು ರೀತಿಯಾಗಿ ಕನೆಕ್ಟ್ ಆಗಿರುವ ಈ ಒಂದು ಆಹಾರಕ್ಕೂ ಈಗ ಕಲಬೆರಕೆ ಎಂಬ ಬಿರುದು ಬಂದಿದೆ. ಹೌದು.. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಹೀಗೆ ಹಲವಾರು ವೆರೈಟಿ ಬಿರಿಯಾನಿಗಳನ್ನ ನೀವು ಟೇಸ್ಟ್ ಮಾಡಿರುತ್ತೀರಿ. ಆದರೆ ಅಂತಹ ಬಿರಿಯಾನಿಯಲ್ಲಿ ಬಳಸುವ ಮಾಂಸ ಮನುಷ್ಯರು ತಿನ್ನುವಂತಹದ್ದೇ ಆಗಿತ್ತು. ಆದರೆ ಇಲ್ಲೊಂದು ಪ್ರಕರಣದಲ್ಲಿ ಕಾಗೇ ಮಾಂಸ ಬಳಸಿ ಬಿರಿಯಾನಿ ತಯಾರಿಸಿದ್ದಾರೆ.
ತಮಿಳುನಾಡಿನ ತಿರುವಲ್ಲೂರಿನಲ್ಲಿ ದಂಪತಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ವಾರ್ನಿಂಗ್ ಕೊಡುವುದರ ಜೊತೆಗೆ ದಂಡವನ್ನು ಕೂಡ ಹಾಕಿದ್ದಾರೆ. ಕಾರಣ ಈ ದಂಪತಿ ಜನರಿಗೆ ಚಿಕನ್ ಬಿರಿಯಾನಿ ಹೆಸರಿನಲ್ಲಿ ಕಾಗೆ ಬಿರಿಯಾನಿ ಮಾಡಿ ಉಣಬಡಿಸುತ್ತಿದ್ದರು ಎಂದು ತಿಳಿದು ಬಂದಿದೆ.
ರಮೇಶ್ ಹಾಗೂ ಭಚ್ಚಮ್ಮ ಎಂಬ ದಂಪತಿ ತೊರೈಪಕ್ಕಮ್ ಗ್ರಾಮದಲ್ಲಿ ಕಾಗೆಗಳನ್ನು ಕೊಲ್ಲುವ ನೀಚ ಕೆಲಸದಲ್ಲಿ ತೊಡಗಿದ್ದರು. ಕೂಡಲೇ ಅವರ ಮನೆಯ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಸುಮಾರು 19 ಮೃತಪಟ್ಟ ಕಾಗೆಗಳು ಇರುವುದು ಕಂಡು ಬಂದಿದೆ. ವಿಚಾರಿಸಿ ನೋಡಿದಾಗ ಇವರು ರೋಡ್ ಸೈಡ್ನಲ್ಲಿ ಹೋಗುತ್ತಿದ್ದ ಪ್ರಯಾಣಿಕರಿಗೆ ಬಿರಿಯಾನಿ ಹೆಸರಿನಲ್ಲಿ ಕಾಗೆ ಬಿರಿಯಾನಿಯನ್ನ ನೀಡುತ್ತಿದ್ದರು ಎಂಬದುದು ತಿಳಿದು ಬಂದಿದೆ.