ಸಾಯಿ ಪಲ್ಲವಿ ಬಾಲಿವುಡ್ ಗೆ ಮೊದಲ ಬಾರಿ ಪದಾರ್ಪಣೆ ಮಾಡುತ್ತಿರುವ ರಾಮಾಯಣ ಚಿತ್ರದಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ. ನಿತೇಶ್ ತಿವಾರಿಯವರ ಈ ಬಹು ನಿರೀಕ್ಷಿತ ಚಿತ್ರದಲ್ಲಿ ಭರ್ಜರಿ ಪ್ರದರ್ಶನದ ನಿರೀಕ್ಷೆಯಿದೆ. ಆದರೆ, ಸಾಯಿ ಪಲ್ಲವಿ ಸೀತಾ ಪಾತ್ರಕ್ಕಾಗಿ ಮಾತ್ರ ಸಸ್ಯಾಹಾರಿಯಾಗಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಇದಕ್ಕೆ ಕೋಪಗೊಂಡ ಸಾಯಿ ಪಲ್ಲವಿ, ತನ್ನ ಮೂಲಕ ಸ್ಪಷ್ಟನೆ ನೀಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ. “ನಾನು ಯಾವಾಗಲೂ ಸಸ್ಯಾಹಾರಿ ಜೀವನವನ್ನು ಅಳವಡಿಸಿಕೊಂಡಿದ್ದೇನೆ. ಇದನ್ನು ಹೊಸದಾಗಿ ಬಿಂಬಿಸುವುದು ಮತ್ತು ರಾಮಾಯಣ ಸಿನಿಮಾಗೆ ಜೋಡಿಸಿ ಸುಳ್ಳು ವದಂತಿಗಳನ್ನು ಹರಡುವುದು ಸಹಿಸುವಂತಿಲ್ಲ” ಎಂದು ಹೇಳಿದ್ದಾರೆ. ನಟಿ ತನ್ನ ಪೋಸ್ಟ್ನಲ್ಲಿ, “ಮಾಧ್ಯಮಗಳು ಅನುಮಾನಾಸ್ಪದ ಮೂಲಗಳಿಂದ ಸುಳ್ಳು ವರದಿಗಳನ್ನು ರಚಿಸುತ್ತಿದ್ದಾರೆ. ಇದು ನಿಲ್ಲಿಸಬೇಕಾದ ಅವಶ್ಯಕತೆಯಿದೆ. ನಾನು ಈಗ ಕಾನೂನು ಕ್ರಮದ ಮೂಲಕ ಗಂಭೀರ ಎಚ್ಚರಿಕೆ ನೀಡುತ್ತಿದ್ದೆನೆ” ಎಂದು ಹೇಳಿದ್ದಾರೆ.