- ಉತ್ತರ ಕೊರಿಯಾದಲ್ಲಿ ಲಿಪ್ ಸ್ಟಿಕ್ ಬ್ಯಾನ್ ಮಾಡಿದ್ದಾರೆ.
- ಉತ್ತರ ಕೊರಿಯಾದಲ್ಲಿ ಫ್ಯಾಷನ್ಗೆ ಸಂಬಂಧಿಸಿದ ಕಾನೂನುಗಳೂ ಇವೆ.
- ಜನರು ಆ ಫ್ಯಾಷನ್ ಕಾನೂನುಗಳನ್ನು ಅನುಸರಿಸಲು ವಿಫಲವಾದರೆ ಕಠಿಣ ಶಿಕ್ಷೆ.
ಚಿಕ್ಕ ಹುಡುಗಿಯರಿಂದ ಹಿಡಿದು ವೃದ್ಧರವರೆಗೂ ಲಿಪ್ ಸ್ಟಿಕ್ ಹಚ್ಚಿಕೊಳ್ಳದೇ ಮನೆಯಿಂದ ಹೊರ ಬರುವುದಿಲ್ಲ. ಅದರಲ್ಲೂ ಲಿಪ್ಸ್ಟಿಕ್ ಇಷ್ಟಪಡದೇ ಇರುವ ಮಹಿಳೆಯರು ಬಹಳ ಕಡಿಮೆ. ಆದರೆ ಇದೇ ಲಿಪ್ ಸ್ಟಿಕ್ ಅನ್ನು ಉತ್ತರ ಕೊರಿಯಾದಲ್ಲಿ ಬ್ಯಾನ್ ಮಾಡಿದ್ದಾರೆ.
ಒಂದಲ್ಲಾ ಎರಡಲ್ಲಾ ಅನೇಕ ವಿಲಕ್ಷಣ ಕಾನೂನುಗಳಿಗೆ ಉತ್ತರ ಕೊರಿಯಾ ಹೆಸರುವಾಸಿಯಾಗಿದೆ. ಉತ್ತರ ಕೊರಿಯಾ ದೇಶದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಅಡಿಯಲ್ಲಿ ಸಾಗುತ್ತಿದೆ. ಉತ್ತರ ಕೊರಿಯಾದಲ್ಲಿ ಫ್ಯಾಷನ್ಗೆ ಸಂಬಂಧಿಸಿದ ಕಾನೂನುಗಳೂ ಇವೆ. ಕೆಂಪು ಬಣ್ಣ ವಿಮೋಚನೆಯ ಸಂಕೇತ ಅನ್ನೋದು ಅಲ್ಲಿಯ ಸರ್ವಾಧಿಕಾರಿಯ ನಂಬಿಕೆ.
ಜನರು ಆ ಫ್ಯಾಷನ್ ಕಾನೂನುಗಳನ್ನು ಅನುಸರಿಸಲು ವಿಫಲವಾದರೆ ಅವರು ಕಠಿಣ ಶಿಕ್ಷೆ ನೀಡುತ್ತಾರೆ. ಉತ್ತರ ಕೊರಿಯಾದಲ್ಲಿ ಹೆಚ್ಚಿನ ಜನಪ್ರಿಯ ಫ್ಯಾಷನ್ ಮತ್ತು ಸೌಂದರ್ಯವರ್ಧಕ ಬ್ರ್ಯಾಂಡ್ಗಳನ್ನು ನಿಷೇಧಿಸಲಾಗಿದೆ. ವಿಶೇಷವಾಗಿ ಕೆಂಪು ಲಿಪ್ ಸ್ಟಿಕ್ ಬಳಕೆಯ ಮೇಲೆ ಕಟ್ಟುನಿಟ್ಟಾದ ನಿಷೇಧವಿದೆ.