ಎಟಿಎಂಗಳಲ್ಲಿ ಯುಪಿಐ ಇಂಟರ್ ಆಪರಬಲ್ ಕ್ಯಾಷ್ ಡೆಪಾಸಿಟ್ ಫೀಚರ್ಅನ್ನು ಎನ್ಪಿಸಿಐ ಅಳವಡಿಸಿದೆ. ಆರ್ಬಿಐ ಮೊನ್ನೆ ಈ ಫೀಚರ್ ಅನ್ನು ಘೋಷಿಸಿದೆ. ಆಯ್ದ ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಬಳಕೆಯ ಅಗತ್ಯ ಇಲ್ಲದೇ ಯುಪಿಐ ಮೂಲಕ ಯಾವುದೇ ಬ್ಯಾಂಕ್ ಖಾತೆಗೆ ಹಣ ಡೆಪಾಸಿಟ್ ಮಾಡಲು ಸಾಧ್ಯ.
ಬ್ಯಾಂಕ್ಗಳ ಎಟಿಎಂನಲ್ಲಿ ಯುಪಿಐ ಬಳಸಿ ಹಣ ಪಡೆಯಲು ಸಾಧ್ಯ. ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಬ್ಯಾಂಕ್ ಕಚೇರಿಗೆ ಹೋಗಬೇಕು. ಡೆಬಿಟ್ ಕಾರ್ಡ್ ಬಳಸಿ ಎಟಿಎಂಗೆ ಹೋಗಿ ಖಾತೆಗೆ ಹಣ ಹಾಕಲು ಸಾಧ್ಯ. ಆದರೆ, ಇದೀಗ ಡೆಪಾಸಿಟ್ ಮಾಡಲು ಡೆಬಿಟ್ ಕಾರ್ಡ್ ಅವಶ್ಯಕತೆ ಇರುವುದಿಲ್ಲ. ಎಟಿಎಂನಲ್ಲಿ ಯುಪಿಐ ಮುಖಾಂತರ ಯಾವುದೇ ಬ್ಯಾಂಕ್ ಖಾತೆಗೂ ಹಣ ಜಮೆ ಮಾಡಲು ಸಾಧ್ಯ. ಈ ಹೊಸ ಫೀಚರ್ ಅನ್ನು ಆರ್ಬಿಐ ಇತ್ತೀಚೆಗೆ ಘೋಷಿಸಿದೆ. ಯುಪಿಐ ಐಸಿಡಿ ಫೀಚರ್ ಅನ್ನು ಎನ್ಪಿಸಿಐ ಫೀಚರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಹಾಗೆಯೇ, ಯುಪಿಐ ಬಳಸಿ ಕ್ಯಾಷ್ ಡೆಪಾಸಿಟ್ ಮಾಡುವ ಕ್ರಮ ನೋಡೋಣ…
ಯುಪಿಐ ಐಸಿಡಿ ಫೀಚರ್ ಬಳಸುವ ಕ್ರಮ:
ಎಲ್ಲಾ ಎಟಿಎಂಗಳಲ್ಲೂ ಐಸಿಡಿ ಸೌಲಭ್ಯ ಇರುವುದಿಲ್ಲ. ಕ್ಯಾಷ್ ರೀಸೈಕ್ಲಿಂಗ್ ಮಷೀನ್ಗಳಿರುವ ಎಟಿಎಂಗಳಲ್ಲಿ ಕೆಲವಕ್ಕೆ ಐಸಿಡಿ ಫೀಚರ್ ನೀಡಲಾಗಿರುತ್ತದೆ. ಅಂಥ ಎಟಿಎಂನಲ್ಲಿ ನೀವು ಕ್ಯಾಷ್ ಡೆಪಾಸಿಟ್ ಮಾಡಬಹುದು. ಹೇಗೆ ಮಾಡಬೇಕೆನ್ನುವ ಕ್ರಮಗಳು ಈ ಕೆಳಕಂಡಂತಿವೆ:
- ಎಟಿಎಂ ಪರದೆಯಲ್ಲಿ ನೀವು ಕ್ಯಾಷ್ ಡೆಪಾಸಿಟ್ ಆಯ್ಕೆ ಕಾಣಬಹುದು. ಅದನ್ನು ಒತ್ತಿದ ಬಳಿಕ ಓಕೆ ಒತ್ತಿರಿ.
- ಯುಪಿಐ ಐಡಿಗೆ ಜೋಡಿತವಾಗಿರುವ ಫೋನ್ ನಂಬರ್ ಅನ್ನು ನಮೂದಿಸಿ. ಅಥವಾ ವಿಪಿಎ ನಂಬರ್ ಹಾಕಿರಿ. ಅಥವಾ ನಿಮ್ಮ ಬ್ಯಾಂಕ್ ಖಾತೆಯ ಐಎಫ್ಎಸ್ಸಿ ಕೋಡ್ ಅನ್ನು ನಮೂದಿಸಿರಿ.
- ಎಟಿಎಂನ ನಿರ್ದಿಷ್ಟ ಸ್ಲಾಟ್ನಲ್ಲಿ ಹಣ ಹಾಕಿರಿ. ಬಳಿಕ ಆಯ್ದ ಬ್ಯಾಂಕ್ ಖಾತೆಗೆ ಅಷ್ಟು ಹಣ ಡೆಪಾಸಿಟ್ ಆಗುತ್ತದೆ.
ಸದ್ಯ ಕೆಲವೇ ಆಯ್ದ ಎಟಿಎಂ ಸೆಂಟರ್ಗಳಲ್ಲಿ ಯುಪಿಐ ಐಸಿಡಿ ಫೀಚರ್ ಅಳವಡಿಸಲಾಗುತ್ತಿದೆ. ಇದರ ಬಳಕೆ ಹೆಚ್ಚಿದಂತೆಲ್ಲಾ ಹೆಚ್ಚಿನ ಎಟಿಎಂಗಳಲ್ಲಿ ಈ ಫೀಚರ್ ಅಳವಡಿಕೆ ಆಗಬಹುದು.