ಭುವನೇಶ್ವರ (ಒಡಿಶಾ): ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಹಣಕಾಸಿನ ನೆರವು ನೀಡದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಿಂದಲೇ ಕೈ ಅಭ್ಯರ್ಥಿ ಹಿಂದೆ ಸರಿದಿದ್ದಾರೆ. ಭುವನೇಶ್ವರದ ಪುರಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಪತ್ರಕರ್ತೆ ಸುಚರಿತಾ ಮೊಹಂತಿ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ, ಸ್ವಂತ ಹಣದಿಂದಲೇ ಚುನಾವಣಾ ಪ್ರಚಾರ ನಡೆಸುವಂತೆ ಒಡಿಶಾ ಕಾಂಗ್ರೆಸ್ ಉಸ್ತುವಾರಿ ಅಜೋಯ್ ಕುಮಾರ್ ಹೇಳಿರುವುದನ್ನು ಉಲ್ಲೇಖಿಸಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ಅವರಿಗೆ ಇ-ಮೇಲ್ ಸಂದೇಶದ ಮೂಲಕ ತಮ್ಮ ಟಿಕೆಟ್ ಹಿಂತಿರುಗಿಸಿರುವುದಾಗಿ ತಿಳಿಸಿದ್ದಾರೆ.