- ಪೂರಿಯ ಜಗನ್ನಾಥ ದೇವಲಾಯದ ನಾಲ್ಕು ದ್ವಾರಗಳು ಭಕ್ತರಿಗಾಗಿ ತೆರಿಯಲಾಗಿದೆ
- ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆ ನೆರವೇರಿಸಿದೆ
ಶ್ರೇಷ್ಠ ಹಾಗೂ ಪ್ರಸಿದ್ದಿ ಹೊಂದಿರುವ ದೇವಾಲಯಗಳಲ್ಲಿ ಪೂರಿಯ ಜಗನ್ನಾಥ ದೇವಾಲಯವು ಒಂದು. ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ದ್ವಾರಗಳಿವೆ. ಸಿಂಹದ್ವಾರ, ಅಶ್ವದ್ವಾರ, ವ್ಯಾಘ್ರದ್ವಾರ, ಮತ್ತು ಹಸ್ತಿದ್ವಾರ. ಈ ದ್ವಾರಗಳು ದೇವಾಲಯದ ನಾಲ್ಕು ಬದಿಗಳಲ್ಲಿದೆ. ಕೋವಿಡ್ ಸಮಯದಲ್ಲಿ ಆನೇಕ ಪ್ರಯಾಣಿಕರು ಬರುವ ಹಿನ್ನೆಲೆ ಕೋವಿಡ್ ಸೊಂಕು ಹರಡುತ್ತದೆ ಎಂದು ಈ ಬಾಗಿಲುಗಳನ್ನು ಮುಚ್ಚಲಾಗಿತ್ತು. ನಂತರ, ಭಕ್ತರಿಗೆ ಸಿಂಹದ್ವಾರದ ಮೂಲಕ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಇದರಿಂದ ಭಕ್ತರಿಗೆ ಸಂಕಷ್ಟವಾಗಿತ್ತು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪೂರಿಯ ಜಗನ್ನಾಥ ದೇವಲಾಯದ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ತೆರಿಯುತ್ತೇವೆ ಎಂದು ಭರವಸೆ ನೀಡಿತ್ತು. ಇದೀಗ ನೂತನವಾಗಿ ರಚನೆಯಾದ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯನ್ನು ನೆರವೇರಿಸಿದೆ.
ಬೆಳಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ, ಪುರಿ ಸಂಸದ ಸಂಬಿತ್ ಪಾತ್ರ ಸೇರಿದಂತೆ ಬಿಜೆಪಿಯ ನಾಯಕರು ತೆರಳಿ ದೇವಾಲಯದ ದ್ವಾರಗಳನ್ನು ತೆರೆಯುವ ಮಹತ್ವದ ಕ್ಷಣದಲ್ಲಿ ಭಾಗಿಯಾಗಿದ್ದರು.
ಕೋವಿಡ್ ಸಮಯದಲ್ಲಿ ಮುಚ್ಚಲ್ಪಟ್ಟ ದ್ವಾರಗಳನ್ನ ಬಿಜೆಪಿ ಗೆದ್ದ ನಂತರ ತೆರಿಯಲ್ಪಟ್ಟಿದೆ. ಅಲ್ಲದೇ 12ನೇ ಶತಮಾನದ ಈ ದೇಗುಲದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 500 ಕೋಟಿ ರೂ. ಮೌಲ್ಯದ ಕಾರ್ಪಸ್ ನಿಧಿಯನ್ನು ಸ್ಥಾಪಿಸುವುದಾಗಿ ಕ್ಯಾಬಿನೆಟ್ ಘೋಷಿಸಿತು. ಪವಿತ್ರ ದೇವಾಲಯದ ದ್ವಾರ ತೆರೆದಿರುವುದು ಭಕ್ತರಿಗೆ ಸಂತಸ ತಂದಿದೆ.