ಬರೋಬ್ಬರಿ 40 ವರ್ಷಗಳ ಬಳಿಕ ಒಡಿಶಾದ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ತೆರೆಯಲಿದೆ. ಒಡಿಸ್ಸಾ ಸರಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು ಇದೇ 14ರಂದು ರತ್ನ ಭಂಡಾರವನ್ನು ತೆರೆದು, ಒಳಗಿರುವ ಆಭರಣಗಳು ಹಾಗೂ ಇತರೆ ಅಮೂಲ್ಯ ವಸ್ತುಗಳನ್ನು ಪಟ್ಟಿ ಮಾಡಬಹುದು ಎಂದು ಶಿಫಾರಸು ಮಾಡಿದೆ.
ಈ ಶಿಫಾರಸನ್ನು ದೇಗುಲ ನಿರ್ವಹಣಾ ಸಮಿತಿಗೆ ಕಳುಹಿಸಲಾಗಿದ್ದು, ಸಮಿತಿಯು ಅದನ್ನು ಒಡಿಶಾ ಸರಕಾರದ ಒಪ್ಪಿಗೆಗೆ ರವಾನಿಸಲಿದೆ. ಈ ಹಿಂದೆ 1978ರಲ್ಲಿ ಅಂದರೆ 46 ವರ್ಷಗಳ ಹಿಂದೆ ರತ್ನ ಭಂಡಾರವನ್ನು ತೆರೆಯಲಾಗಿತ್ತು. ಒಂದು ವೇಳೆ ನಕಲಿ ಕೀಲಿಕೈ ಬಳಸಿ ಭಂಡಾರದ ಬಾಗಿಲು ತೆರೆಯಲು ಆಗದಿದ್ದರೆ, ಒಡೆದು ತೆರೆಯಲು ನಿರ್ಧರಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನ್ಯಾ|ಬಿಸ್ವನಾಥ್ ರಥ್ ಹೇಳಿದ್ದಾರೆ.