ಪಾಕಿಸ್ತಾನದ ಸಿಂಧ್ನಲ್ಲಿ 15 ದಿನಗಳ ಹೆಣ್ಣು ಮಗುನ್ನು ಜೀವಂತ ಸಮಾಧಿ ಮಾಡಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಆರ್ವೈ ಸುದ್ದಿ ಸಂಸ್ಥೆ ಈ ಘಟನೆಯ ಬಗ್ಗೆ ವರದಿ ಮಾಡಿದೆ. ತಯ್ಯಬ್ ಎಂಬಾತ ನಾನೇ ನನ್ನ ಕೈಯಾರೆ ಮಗುವನ್ನು ಜೀವಂತ ಸಮಾಧಿ ಮಾಡಿದ್ದೇನೆ ಎಂದು ಈ ಅಪರಾಧವನ್ನು ತಾನೇ ಒಪ್ಪಿಕೊಂಡಿದ್ದಾನೆ.
ಹಣಕಾಸಿನ ಸಮಸ್ಯೆಯ ಕಾರಣದಿಂದ ಆತನಿಗೆ ಮಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಹಣವಿಲ್ಲ ಎಂದು, ತನ್ನ ನವಜಾತ ಶಿಶುವನ್ನು ಹೂಳುವ ಮುನ್ನ ಗೋಣಿಚೀಲದಲ್ಲಿ ಇಟ್ಟಿದ್ದಾಗಿ ತಯ್ಯಬ್ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ತಯ್ಯಬ್ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಸಮಾಧಿಯನ್ನು ತೆರೆಯಲು ನ್ಯಾಯಾಲಯದ ಆದೇಶಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ