ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಬ್ರಿಟನ್ನ ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಭ್ರಷ್ಟಾಚಾರದಿಂದ ಹಿಡಿದು ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರೆಗೆ ಅವರ ಮೇಲೆ ಆರೋಪವಿದೆ. ಆದರೆ, ತನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ತನ್ನನ್ನು ಅಧಿಕಾರದಿಂದ ದೂರವಿಡಲು ಈ ರೀತಿಯ ಟ್ರಿಕ್ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಹಾಂಗ್ ಕಾಂಗ್ನ ಕೊನೆಯ ಬ್ರಿಟಿಷ್ ಗವರ್ನರ್ ಕನ್ಸರ್ವೇಟಿವ್ ಪೀರ್ ಕ್ರಿಸ್ ಪ್ಯಾಟನ್ ಫೆಬ್ರವರಿಯಲ್ಲಿ ಆಕ್ಸ್ಫರ್ಡ್ನ ಚಾನ್ಸೆಲರ್ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದರು. ವಿಶ್ವವಿದ್ಯಾಲಯದ ವೆಬ್ಸೈಟ್ ಪ್ರಕಾರ, 10 ವರ್ಷಗಳ ಅವಧಿಯ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ವರೆಗೆ ಸಾರ್ವಜನಿಕಗೊಳಿಸಲಾಗುವುದಿಲ್ಲ. ಅಕ್ಟೋಬರ್ ಅಂತ್ಯದಲ್ಲಿ ಈ ಹುದ್ದೆಗೆ ಮತದಾನ ನಡೆಯಲಿದೆ. ಇಮ್ರಾನ್ 1975 ರಲ್ಲಿ ಆಕ್ಸ್ಫರ್ಡ್ನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅವರು ಪಾಕಿಸ್ತಾನದ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದರು.