ಪಾಕಿಸ್ತಾನದಲ್ಲಿ 4 ದಿನಗಳಿಂದ ಧಾರಕಾರವಾಗಿ ಗುಡುಗು, ಮಿಂಚು ಸಮೇತ ಮಳೆಯಾಗಿದೆ. ಧಾರಕಾರ ಮಳೆಯಿಂದಾಗಿ ಇಲ್ಲಿವರೆಗೆ 63 ಜನ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಕಾಣಿಯಾಗಿದ್ದಾರೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಹೆಚ್ಚು ಸಾವು – ನೋವು ಸಂಭವಿಸಿದೆ ಎನ್ನಲಾಗಿದೆ.
ಪಾಕ್ನಲ್ಲಿ ಭಾರೀ ಮಳೆ ಹಾಗೂ ಗುಡುಗಿನಿಂದ 14 ಜನರು ಮೃತಪಟ್ಟಿದ್ದರೆ, ದೇಶದ ವಾಯುಭಾಗದಲ್ಲಿ ಮನೆಗಳು ನೆಲಕ್ಕೆ ಉರುಳಿದ್ದು, 32ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ 15 ಮಕ್ಕಳು, 5 ಮಹಿಳೆಯರು ಕೂಡ ಸೇರಿದ್ದಾರೆ. 100ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದು, ರಕ್ಷಣಾ ಸಿಬ್ಬಂದಿಯವರು ಇನ್ನೂ ಹುಡುಕಾಟದಲ್ಲಿದ್ದಾರೆ. ಬಲೂಚಿಸ್ತಾನದಲ್ಲೂ 10 ಮಂದಿ ಸಾವಿಗೀಡಾಗಿದ್ದಾರೆ. ಮಳೆಯಿಂದ 1,370 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.