ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಹಲವಾರು ವಿಷಯಗಳನ್ನ ತಮ್ಮ ಯೂಟೂಬ್ ಚಾನೆಲ್ಗಳಲ್ಲಿ ಹಂಚಿಕೊಳ್ಳುತ್ತಿದ್ದ ಕೆಲವು ಪಾಕಿಸ್ತಾನಿ ಯೂಟ್ಯೂಬರ್ಗಳನ್ನು ಪಾಕಿಸ್ತಾನ ಸೇನೆಯು ಗಲ್ಲಿಗೇರಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಹೇಳುತ್ತಿವೆ. ಮೋದಿ ಪರವಾಗಿ ವಿಡಿಯೋಗಳನ್ನ ಹಾಕುತ್ತಿದ್ದ ಯೂಟ್ಯೂಬರ್ಗಳು ದಿಢೀರ್ ಅಂತ ನಾಪತ್ತೆಯಾಗಿದ್ದಾರೆ. ಅವರ ಈ ಒಂದು ಮಿಸ್ಸಿಂಗ್ ಈ ರೀತಿಯಾ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿವೆ.
ಹಲವಾರು ವರದಿಯ ಪ್ರಕಾರ, ಈ ಇಬ್ಬರು ಸೇರಿದಂತೆ ಸುಮಾರು 12 ಯೂಟ್ಯೂಬರ್ಗಳು ಕಣ್ಮರೆಯಾಗಿದ್ದಾರೆ. ಹಾಗೂ ಸುಮಾರು ದಿನಗಳಿಂದ ಅವರ ಯೂಟ್ಯೂಬ್ ಚಾನೆಲ್ಗಳಲ್ಲಿ ಯಾವುದೇ ಹೊಸ ವಿಡಿಯೋ ಅಥವ ಪೋಸ್ಟ್ ಕೂಡಾ ಹಾಕಿಲ್ಲ.
12 ಜನರ ಪೈಕಿ ಇಬ್ಬರು ಪ್ರಮುಖ ಯೂಟ್ಯೂಬರ್ಗಳಾದ ಸನಾ ಅಮ್ಜದ್ ಮತ್ತು ಶೋಯೆಬ್ ಚೌಧರಿ ಇದ್ದಾರೆ. ಇವರು ರೋಡ್ ಸೈಡ್ ಜನರನ್ನ ಸಂದರ್ಶನ ಮಾಡಿ ಸಾರ್ವಜನಿಕ ಪ್ರತಿಕ್ರಿಯೆ ಪಡೆಯುವ ಹಲವಾರು ವೀಡಿಯೊಗಳಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಪಾಕಿಸ್ತಾನದ ಇಬ್ಬರು ಯೂಟ್ಯೂಬರ್ ಪತ್ರಕರ್ತರಾದ ಸನಾ ಅಮ್ಜದ್ ಮತ್ತು ಶೋಯೆಬ್ ಚೌಧರಿ ಅವರನ್ನು ಪಾಕಿಸ್ತಾನ ಸರ್ಕಾರ ಗಲ್ಲಿಗೇರಿಸಿದೆ ಎಂದು ಹಲವಾರು ವರದಿಗಳು ಉಲ್ಲೇಖವಾಗಿದೆ. ಇವರ ಒಂದು ಹತ್ಯೆಗೆ ಕಾರಣ ಏನು ಎಂಬದನ್ನ ನೋಡಿದರೆ, ಭಾರತದ ಪರವಾಗಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ವಿಡಿಯೋಗಳನ್ನ ಮಾಡಿದ್ದರು. ಈ ವಿಡಿಯೋಗಳು ಸಾಕಷ್ಟು ಜನಪ್ರಿಯತೆಯನ್ನೂ ಸಹ ತಂದುಕೊಟ್ಟಿತ್ತು. ಇದರ ಜೊತೆಗೆ ಇವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಕಷ್ಟು ಜನ ಫ್ಯಾನ್ಸ್ಗಳನ್ನ ಗಳಿದ್ದರು.
ರಿಯಲ್ ಎಂಟರ್ಟೈನ್ಮೆಂಟ್ (ಶೋಯೆಬ್ ಚೌಧರಿ) ಚಾನೆಲ್ ಮತ್ತು ಸನಾ ಅಮ್ಜದ್ ಅವರ ಚಾನೆಲ್ ಪಾಕಿಸ್ತಾನದ ಪ್ರಚಲಿತ ವಿದ್ಯಮಾನಗಳು ಮತ್ತು ಸಾರ್ವಜನಿಕ ಅಭಿಪ್ರಾಯದ ಬಗ್ಗೆ ಹಲವಾರು ವಿಡಿಯೋಗಳನ್ನ ಹಂಚಿಕೊಳ್ಳುತ್ತಿದ್ದರು. ಇದರಲ್ಲಿ ಭಾರತಕ್ಕೆ ಹಾಗೂ ಪ್ರಧಾನಿ ಮೋದಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿಕ್ರಿಯೆಗಳು ಸೇರಿವೆ. ಅವರ ಯೂಟ್ಯೂಬ್ ವೀಡಿಯೊಗಳು ಭಾರತೀಯ ವೀಕ್ಷರ ಗಮನ ಸೆಳೆಯುವಲ್ಲಿ ಸಖತ್ ಆಗಿ ಯಶಸ್ವಿಯಾಗಿದ್ದವು.
ಇದರ ಮಧ್ಯೆ ಯೂಟ್ಯೂಬರ್ಗಳನ್ನು ಗಲ್ಲಿಗೇರಿಸಲಾಗಿದೆ ಎಂಬ ಈ ಒಂದು ಗಾಸಿಪ್ ಅನ್ನು ಪಾಕಿಸ್ತಾನಿ ಪತ್ರಕರ್ತೆ ಅರ್ಜೂ ಕಾಜ್ಮಿ ಸುಳ್ಳು ಎಂದು ಹೇಳಿದ್ದಾರೆ. ಅವರು ಮೈಕ್ರೋ-ಬ್ಲಾಗಿಂಗ್ ಸೈಟ್ X ನಲ್ಲಿನ ಪೋಸ್ಟ್ಗೆ ಕಾಮೆಂಟ್ ಮಾಡಿ ‘ನಕಲಿ ಸುದ್ದಿ’ ಎಂದು ತಿಳಿಸಿದ್ದಾರೆ. ಪಾಕಿಸ್ತಾನ ಸರ್ಕಾರ ಪಾಕಿಸ್ತಾನಿ ಯೂಟ್ಯೂಬರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಅಷ್ಟೇ ಎಂದು ಅರ್ಜೂ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಮಾಹಿತಿ ತಿಳಿಸಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:
https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ:
https://chat.whatsapp.com/HWayJDSBf9aI06q6jplPgc