- ಪಾಕ್ ಆಕ್ರಮಿತ ಕಾಶ್ಮೀರದ ಕೆಲವು ಭಾಗಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ಮುಂದುವರೆದಿದೆ.
- ವಿದ್ಯುತ್ ಬೆಲೆ ಏರಿಕೆ, ತೆರಿಗೆ ಹೊರೆ ವಿರೋಧಿಸಿ ಅಲ್ಲಿನ ಜನ ಬೀದಿಗೆ ಇಳಿದು ಪ್ರತಿಭಟಿಸಿದ್ದಾರೆ.
- ಘರ್ಷಣೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಕೆಲವು ಭಾಗಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ಮುಂದುವರಿದಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಮುಜಫರಾಬಾದ್ನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ನಿಯಂತ್ರಿಸಿದ್ದರೂ ಸಾಮಾನ್ಯ ಜನ ಜೀವನ ಮತ್ತು ವ್ಯವಹಾರಗಳು ಅಸ್ತವ್ಯಸ್ತಗೊಂಡಿದೆ.
ಪಿಓಕೆ ಅಲ್ಲಿನ ವಿದ್ಯುತ್ ಬೆಲೆ ಏರಿಕೆ, ತೆರಿಗೆ ಹೊರೆ ವಿರೋಧಿಸಿ ಅಲ್ಲಿನ ಜನ ಬೀದಿಗೆ ಇಳಿದು ಪ್ರತಿಭಟಿಸಿದ್ದಾರೆ. ಜನರ ಮನೆಗಳು ಮತ್ತು ಮಸೀದಿಗಳ ಸುತ್ತಲೂ ಪೊಲೀಸರು ಅಶ್ರುವಾಯು ಶೆಲ್ ಅನ್ನು ಆಶ್ರಯಿಸಿದಾಗ ಘರ್ಷಣೆಗಳು ಭುಗಿಲೆದ್ದಿತು.
ಇದರಿಂದ ಸಮಹ್ನಿ, ಸೆಹನ್ಸಾ, ಮೀರ್ಪುರ್, ರಾವಲಕೋಟ್, ಖುಯಿರಟ್ಟಾ, ತಟ್ಟಪಾನಿ ಮತ್ತು ಹಟ್ಟಿಯಾನ್ ಬಾಲಾ ಮುಂತಾದ ಪಿಒಕೆಯ ಬಹು ಭಾಗಗಳಲ್ಲಿ ಮುಷ್ಕರಕ್ಕೆ ಕರೆ ನೀಡಲಾಯಿತು. ಪಾಕಿಸ್ತಾನಿ ಪಡೆಗಳು ನಿರಾಯುಧ ನಾಗರಿಕರ ಮೇಲೆ ಗುಂಡು ಹಾರಿಸಿದ್ದು ಘರ್ಷಣೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಿಒಕೆ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ.