ಗಾಂಜಾ ಬೆಳೆಯುವುದು ಸೇವನೆ ಮಾಡೋದು ಅಕ್ಷಮ್ಯ ಅಪರಾಧ. ಗಾಂಜಾ ಅಂದ್ರೆ ನಶೆ ಪದಾರ್ಥ, ಜೀವನ ಹಾಳು ಮಾಡುತ್ತದೆ ಎಂಬ ಆರೋಪಗಳಿವೆ. ಹೀಗಾಗಿ ಜಗತ್ತಿನ ಬಹುತೇಕ ದೇಶಗಳಲ್ಲಿ ಗಾಂಜಾ ಬ್ಯಾನ್ ಆಗಿದೆ. ಆದರೆ ಇದೀಗ ಅದೇ ಗಾಂಜಾವನ್ನಾ ಲೀಗಲ್ ಆಗಿಸಿ ಗಾಂಜಾ ವ್ಯಸನಿಗಳಿಗೆ ಪಾಕ್ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ . ರೈತರು ತಮ್ಮ ಗದ್ದೆಗಳಲ್ಲಿ ಇವಾಗ ಬಹಿರಂಗವಾಗಿ ಗಾಂಜಾ ಬೆಳೆಯಲು ಅನುಮತಿ ಸಿಕ್ಕಿದೆ.
ಗಾಂಜಾದಲ್ಲಿ ಔಷಧೀಯ ಗುಣಗಳು ಹೇರಳವಾಗಿ ಇದೆ. ಅದೆಷ್ಟೋ ಔಷಧಗಳಿಗೆ ಗಾಂಜಾ ಆಧಾರವಾಗಿದೆ. ಗಾಂಜಾ ಬೆಳೆಯಲು ರೈತರಿಗೆ ಅನುಮತಿ ನೀಡಿರುವುದು ಯಾಕೆ? ಇದರಿಂದ ಸರ್ಕಾರಕ್ಕೆ ಏನು ಲಾಭ? ಆರ್ಥಿಕತೆ ಇದರಿಂದ ಸರಿ ಹೋಗುತ್ತದೆಯಾ? ಎನ್ನುವುದು ತುಂಬಾ ಕುತೂಹಲ ಮೂಡಿಸಿದೆ.
ಎನಪ್ಪಾ ಇದು ನಮ್ಮ ದೇಶದಲ್ಲಿ ಗಾಂಜಾ ಲೀಗಲ್ ಆಯ್ತ ಅಂತಾ. ಅಷ್ಟಕ್ಕೂ ಹೀಗೆ ರೈತರು ಗಾಂಜಾ ಬೆಳೆಯಲು ಅನುಮತಿ ನೀಡಿರುವುದು ಭಾರತದಲ್ಲಿ ಅಲ್ಲ ಬದಲಾಗಿ ಪಾಪಿ ಪಾಕಿಸ್ತಾನದಲ್ಲಿ. ಹೌದು ಪಾಪಿ ಪಾಕ್ನಲ್ಲಿಗ ತಿನ್ನೋಕು ಕೈಯಲ್ಲಿ ಬಿಡಿಗಾಸು ಇಲ್ಲದೆ ಪರದಾಡುತ್ತಿದೆ. ಸಾಲದ ಸುಳಿಯಿಂದಾಗಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾನೇ ಹದಗೆಟ್ಟಿದೆ. ಈಗಾಗಲೇ ಅಲ್ಲಿನ ಜನ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಸರ್ಕಾರ ಹಣ ಮತ್ತು ಬಡತನ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಲು ರೈತರಿಗೆ ಗಾಂಜಾ ಬೆಳೆಯಲು ಅನುಮತಿ ನೀಡಿದ್ದಾರೆ.
ಕುತಂತ್ರಿ ಪಾಕಿಸ್ತಾನ ತಲೆ ಮೇಲೆ ಈಗಾಗಲೇ ಲಕ್ಷ ಕೋಟಿ ರೂ. ಸಾಲವಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಸೇರಿದಂತೆ ಕಂಡ ಕಂಡ ಕಡೆ ಸಾಲ ಮಾಡಿದೆ. ಪಾಕ್ನ ಕುಚಿಕು ದೇಶವಾದ ಚೀನಾದ ಬಳಿಯೂ ಸಾವಿರಾರೂ ಕೋಟಿ ಸಾಲ ಮಾಡಿಕೊಂಡು ಪರದಾಡುತ್ತಿದೆ. ಹೀಗಿರುವಾಗ ಏನೇ ಮಾಡಿದರೂ ಪರಿಸ್ಥಿತಿ ಕಂಟ್ರೋಲ್ಗೆ ಬರುತ್ತಿಲ್ಲ. ಹೀಗಾಗಿ ಕೊನೇ ಪಕ್ಷ ಗಾಂಜಾ ಬೆಳೆ ಬೆಳೆದು ಒಂದಷ್ಟು ದುಡ್ಡು ಮಾಡೋಣ ಅಂತಾ ಗಾಂಜಾ ಹಿಂದೆ ಬೆನ್ನಟ್ಟಿದೆ ಪಾಕ್ ಸರ್ಕಾರ.