ಪಂಚಮಸಾಲಿ 2ಎ ಮೀಸಲಾತಿಗಾಗಿ ಹೋರಾಟ ತೀವ್ರಗೊಂಡಿದೆ. ಬೆಳಗಾವಿ ಅಧಿವೇಶದ ವೇಳೆಯೇ ಮೀಸಲಾತಿ ಪ್ರತಿಭಟನೆ ಕಾವೇರುತ್ತಿದೆ. ಹೋರಾಟದ ವೇಳೆ ಲಾಠಿಚಾರ್ಜ್ ನಿಂದ ಕಾಂಗ್ರೆಸ್ ಶಾಸಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಜೆಪಿ ಸರ್ಕಾರದ ವೇಳೆ ಹೋರಾಟದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಕಾಶಪ್ಪನವರ್ ಭಾಗಿಯಾಗಿದ್ದ ಶಾಸಕರು.
ನಮ್ಮ ಸರ್ಕಾರ ಬಂದ್ರೆ ಮೀಸಲಾತಿ ಕೊಡಿಸ್ತೀವಿ ಎಂದಿದ್ದರು ಈ ಕಾಂಗ್ರೆಸ್ ಶಾಸಕರು. ಆದರೇ ಈಗ ಮೀಸಲಾತಿ ಕೊಡಿಸದೆ ಕಾಂಗ್ರೆಸ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಂದು ಹೋರಾಟ ಮಾಡಿ ಇಂದು ದೂರವುಳಿದಿದ್ದಕ್ಕೆ ಶ್ರೀಗಳು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆಗೆ ಬೆಂಬಲ ಕೊಡದೆ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕಾಂಗ್ರೆಸ್ ಶಾಸಕರು. ಅಂದು ಹೋರಾಟ ಮಾಡಿದ್ದ ಶಾಸಕ ಕಾಶಪ್ಪನವರ್ ಇಂದು ಉಲ್ಟಾ ಹೊಡೆದಿದ್ದಾರೆ. ಸಚಿವೆಯಾಗಿದ್ರೂ ಸಹಾಯ ಮಾಡಲಾಗದ ಸ್ಥಿತಿಯಲ್ಲಿ ಸಚಿವೆ ಹೆಬ್ಬಾಳ್ಕರ್ ಇದ್ದಾರೆ. ಮೀಸಲಾತಿ ವಿಚಾರದಲ್ಲಿ ‘ಧರ್ಮ’ಸಂಕಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಿಲುಕಿಕೊಂಡಿದ್ದಾರೆ.
ಬಿಜೆಪಿಯ ನಾಯಕರು ಇದನ್ನೇ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ನಾಯಕರನ್ನು ತರಾಟೆ ತೆಗೆದುಕೊಂಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.