ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ 117 ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ. ಈ ಕ್ರೀಡಾಳುಗಳು ಒಟ್ಟು ಒಟ್ಟು 69 ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇವರಲ್ಲಿ 47 ಮಹಿಳಾ ಸ್ಪರ್ಧಿಗಳಿರುವುದು ವಿಶೇಷ. ಈಗಾಗಲೇ ಒಲಿಂಪಿಕ್ಸ್ ಅಭಿಯಾನ ಆರಂಭಿಸಿರುವ ಭಾರತೀಯರು ಶನಿವಾರ ಮತ್ತಷ್ಟು ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 33ನೇ ಆವೃತ್ತಿಯ ಬೇಸಿಗೆ ಒಲಿಂಪಿಕ್ಸ್ಗೆ ಅಧಿಕೃತ ಚಾಲನೆ ದೊರೆತಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಭಾರತದ 117 ಸ್ಪರ್ಧಿಗಳು ಕಣದಲ್ಲಿದ್ದಾರೆ. ಅದರಲ್ಲೂ ಜುಲೈ 27 ರಂದು ನಡೆಯುವ 11 ಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಗಳು ಕಣಕ್ಕಿಳಿಯಲಿರುವುದು ವಿಶೇಷ. ಶನಿವಾರ ಮಧ್ಯಾಹ್ನದಿಂದ ಪಂದ್ಯಗಳು ಶುರುವಾಗಲಿದ್ದು, ಭಾರತವು ಏರ್ ರೈಫಲ್ ಮೂಲಕ ಅಭಿಯಾನ ಆರಂಭಿಸಲಿದೆ.
ಇದಾದ ಬಳಿಕ ಬ್ಯಾಡ್ಮಿಂಟನ್, ರೋಯಿಂಗ್, ಶೂಟಿಂಗ್, ಟೆನಿಸ್, ಟೇಬಲ್ ಟೆನ್ನಿಸ್, ಬಾಕ್ಸಿಂಗ್ ಮತ್ತು ಹಾಕಿ ಪಂದ್ಯಗಳು ನಡೆಯಲಿದ್ದು, ಈ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಳುಗಳು ಕಣಕ್ಕಿಳಿಯಲಿದ್ದಾರೆ. ಈ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.
ಈ ಸ್ಪರ್ಧೆಗಳ ವೇಳಾಪಟ್ಟಿ
12:30 PM – ಶೂಟಿಂಗ್: 10 ಮೀ ಏರ್ ರೈಫಲ್ ಮಿಶ್ರ ತಂಡ – ರಮಿತಾ ಜಿಂದಾಲ್, ಅರ್ಜುನ್ ಬಾಬುತಾ | ಎಲವೆನಿಲ್ ವಲರಿವನ್, ಸಂದೀಪ್ ಸಿಂಗ್.
12:30 PM – ರೋಯಿಂಗ್: ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್ – ಬಲರಾಜ್ ಪನ್ವಾರ್
2:00 PM – ಶೂಟಿಂಗ್: ಪುರುಷರ 10 ಮೀ ಏರ್ ಪಿಸ್ತೂಲ್ – ಅರ್ಜುನ್ ಸಿಂಗ್ ಚೀಮಾ, ಸರಬ್ಜೋತ್ ಸಿಂಗ್
2:00 PM – ಶೂಟಿಂಗ್: 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ – ಚಿನ್ನ, ಕಂಚಿನ ಪದಕ ಪಂದ್ಯಗಳು (ಅರ್ಹತೆಯ ಬಳಿಕ)
3:30 PM- ಟೆನಿಸ್: ಪುರುಷರ ಡಬಲ್ಸ್ ಮೊದಲ ಸುತ್ತು – ಶ್ರೀರಾಮ್ ಬಾಲಾಜಿ/ರೋಹನ್ ಬೋಪಣ್ಣ vs ಫ್ಯಾಬಿಯನ್ ರೆಬೌಲ್/ಎಡ್ವರ್ಡ್ ರೋಜರ್-ವ್ಯಾಸೆಲಿನ್ (ಫ್ರಾನ್ಸ್)
4:00 PM – ಶೂಟಿಂಗ್: ಮಹಿಳೆಯರ 10 ಮೀ ಏರ್ ಪಿಸ್ತೂಲ್- ಮನು ಭಾಕರ್, ರಿದಮ್ ಸಾಂಗ್ವಾನ್
7:10 PM- ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್- ಲಕ್ಷ್ಯ ಸೇನ್ vs ಕೆವಿನ್ ಕಾರ್ಡನ್ (ಗ್ವಾಟೆಮಾಲಾ)
7:15 PM- ಟೇಬಲ್ ಟೆನಿಸ್: ಪುರುಷರ ಸಿಂಗಲ್ಸ್, ಹರ್ಮೀತ್ ದೇಸಾಯಿ ವಿರುದ್ಧ ಜೈದ್ ಅಬೋ ಯಮನ್
8:00 PM- ಬ್ಯಾಡ್ಮಿಂಟನ್: ಪುರುಷರ ಡಬಲ್ಸ್- ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ/ಚಿರಾಗ್ ಶೆಟ್ಟಿ vs ಲ್ಯೂಕಾಸ್ ಕಾರ್ವಿ/ರೋನನ್ ಲಾಬರ್ (ಫ್ರಾನ್ಸ್)
9:00 PM- ಹಾಕಿ: ಪುರುಷರ ಪೂಲ್ ಬಿ – ಭಾರತ vs ನ್ಯೂಝಿಲೆಂಡ್
11:50 PM- ಬ್ಯಾಡ್ಮಿಂಟನ್: ಮಹಿಳೆಯರ ಡಬಲ್ಸ್- ಅಶ್ವಿನಿ ಪೊನ್ನಪ್ಪ / ತನಿಶಾ ಕ್ರಾಸ್ಟೊ vs ಕಿಮ್ ಸೋ ಯೆಂಗ್ / ಕಾಂಗ್ ಹೀ ಯೋಂಗ್ (ರಿಪಬ್ಲಿಕ್ ಆಫ್ ಕೊರಿಯಾ) 12:02 AM – ಬಾಕ್ಸಿಂಗ್: ಮಹಿಳೆಯರ 54 ಕೆಜಿ – ಪ್ರೀತಿ ಪವಾರ್ vs ಕಿಮ್ ಅನ್ಹ್ ವೋ (ವಿಯೆಟ್ನಾಂ)