ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿತ ಪದಕ ವಿಜೇತ ಭಾರತೀಯ ಪುರುಷರ ಹಾಕಿ ತಂಡವು ಸ್ವದೇಶಕ್ಕೆ ಆಗಮಿಸಿದೆ. ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಶನಿವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಅದ್ದೂರಿ ಸ್ವಾಗತ ನೀಡಲಾಯಿತು. ಪ್ರತಿಯೊಬ್ಬ ಆಟಗಾರರಿಗೂ ಶಾಲು, ಹೂವಿನ ಹಾರ ಹಾಕುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಆಟಗಾರರು ತಮ್ಮ ಪದಕಗಳನ್ನು ಕ್ಯಾಮರಾಗೆ ತೋರಿಸುವ ಮೂಲಕ ವಿಶಿಷ್ಟವಾಗಿ ಗೆಲುವನ್ನು ಆಚರಿಸಿದರು. ಕೆಲವು ಆಟಗಾರರು ಡ್ರಮ್ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ನರ್ತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್, ಪದಕ, ಪದಕನೇ, ದೇಶಕ್ಕಾಗಿ ಗೆದ್ದಿರುವುದು ದೊಡ್ಡ ವಿಷಯವಾಗಿದೆ. ಫೈನಲ್ ಪ್ರವೇಶಿಸಲು ಪ್ರಯತ್ನಿಸಿದೆವು, ಆದರೆ, ನಮ್ಮ ಕನಸು ನನಸು ಆಗಲಿಲ್ಲ. ಆದರೆ ಬರಿಗೈಯಲ್ಲಿ ಹಿಂದಿರುಗಲಿಲ್ಲ. ಪದಕ ಗೆದ್ದು ವಾಪಸ್ಸಾಗಿದ್ದು, ಇದಕ್ಕಾಗಿ ಅಪಾರ ಬೆಂಬಲ ನೀಡಿದ ಕೇಂದ್ರ ಸರ್ಕಾರ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮತ್ತು ಒಡಿಶಾ ಸರ್ಕಾರಕ್ಕೆ ಧನ್ಯವಾದ ಹೇಳುವುದಾಗಿ ತಿಳಿಸಿದರು.