ಟೆನ್ನೀಸ್ ಲೆಜೆಂಡ್ ನೊವಾಕ್ ಜೊಕೋವಿಕ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಗೆಲುವಿನ ಮೂಲಕ 37 ನೇ ವಯಸ್ಸಿನಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆಗೆ ಜೊಕೊವಿಕ್ ಭಾಜನರಾಗಿದ್ದಾರೆ. ಭಾನುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ ಟೆನಿಸ್ ಸಿಂಗಲ್ಸ್ನಲ್ಲಿ ನೊವಾಕ್ ಜೊಕೊವಿಕ್ ಸ್ಪ್ಯಾನಿಷ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರನ್ನು 7-6(3), 7-6(2) ನೇರ ಸೆಟ್ಗಳಿಂದ ಮಣಿಸಿದರು. ಒಲಂಪಿಕ್ಸ್ ನಲ್ಲಿ ಜೊಕೊವಿಕ್ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಅವರು 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು.
16 ವರ್ಷಗಳ ನಂತರ ಜೊಕೊವಿಕ್ ಚಿನ್ನದ ಪದಕ ಪಡೆದಿದ್ದಾರೆ. ಈ ಗೆಲುವಿನೊಂದಿಗೆ ಜೊಕೊವಿಕ್ ರಾಫೆಲ್ ನಡಾಲ್, ಸ್ಟೆಫಿ ಗ್ರಾಫ್, ಆಂಡ್ರೆ ಅಗಾಸ್ಸಿ, ಸೆರೆನಾ ವಿಲಿಯಮ್ಸ್ ಮತ್ತು ಗೋಲ್ಡನ್ ಸ್ಲಾಮ್ ವಿಜೇತರ ಸಾಲಿಗೆ ಸೇರಿದ್ದಾರೆ. ಜೊಕೊವಿಕ್ ಈಗಾಗಲೇ ಪುರುಷರ ವಿಭಾಗದಲ್ಲಿ 24 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನ ಗೆದ್ದಿದ್ದಾರೆ.