ಪ್ಯಾರಿಸ್ ಒಲಿಂಪಿಕ್ಸ್ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ನಂತರ ಇದೀಗ 50 ಕೆ.ಜಿ. ವಿಭಾಗದ ಫೈನಲ್ ಪಂದ್ಯ ಅಮೆರಿಕದ ಕುಸ್ತಿಪಟು ಸಾರಾ ಆನ್ ಹಿಲ್ಡೆಬ್ರಾಂಡ್ ಮತ್ತು ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ನಡುವೆ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ ಸಂಘಟನಾ ಸಮಿತಿಯು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಎರಡನೇ ದಿನ ನಡೆಸಿದ ತೂಕ ಪರೀಕ್ಷೆಯಲ್ಲಿ ವಿನೇಶ್ ನಿಗದಿಗಿಂದ ಅಧಿಕ ತೂಕ ಹೊಂದಿರುವುದು ಕಂಡು ಬಂದಿರುವುದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಅಂತರಾಷ್ಟ್ರೀಯ ಕುಸ್ತಿಯ ನಿಯಮಗಳ ಸೆಕ್ಷನ್ 11 ರ ಪ್ರಕಾರ, ಇದೀಗ ಫೈನಲ್ನಲ್ಲಿ ವಿನೇಶ್ ಅವರ ಸ್ಥಾನವನ್ನು ಸೆಮಿಫೈನಲ್ನಲ್ಲಿ ವಿನೇಶ್ ವಿರುದ್ಧ ಸೋತಿದ್ದ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರಿಗೆ ನೀಡಲಾಗಿದೆ. ಉಳಿದಂತೆ ಕಂಚಿನ ಪದಕಕ್ಕಾಗಿ ಜಪಾನ್ನ ಯುಯಿ ಸುಸಾಕಿ ಮತ್ತು ಉಕ್ರೇನ್ನ ಒಕ್ಸಾನಾ ಲಿವಾಚ್ ನಡುವೆ ರಿಪಿಚೇಜ್ ಪಂದ್ಯ ನಡೆಯಲಿದೆ ಎಂದು ತಿಳಿಸಿದೆ.