ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ 117 ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ. ಈ ಕ್ರೀಡಾಳುಗಳು ಒಟ್ಟು 69 ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಭಾರತೀಯ ಸ್ಪರ್ಧಿಗಳಿಂದ ನಿರಾಸೆಯಾಗಿದೆ. ಶನಿವಾರ ನಡೆದ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಶೂಟರ್ಗಳು ಭಾಗವಹಿಸಿದ್ದರು. ಆದರೆ ಮಿಶ್ರ ಏರ್ ರೈಫಲ್ ವಿಭಾಗದಲ್ಲಿ ಪದಕದ ಸುತ್ತಿಗೆ ಪ್ರವೇಶಿಸುವಲ್ಲಿ ಭಾರತೀಯ ಶೂಟರ್ಗಳು ವಿಫಲರಾಗಿದ್ದಾರೆ.
ಭಾರತೀಯ ಶೂಟರ್ಗಳು ಪಡೆದ ಅಂಕಗಳು:
- ರಮಿತಾ ಮತ್ತು ಅರ್ಜುನ್- 6ನೇ ಸ್ಥಾನ (628.7 ಅಂಕಗಳು)
- ಎಲವೆನಿಲ್ ಮತ್ತು ಸಂದೀಪ್- 12ನೇ ಸ್ಥಾನ (626.3 ಅಂಕಗಳು)
ಶೂಟಿಂಗ್ನಲ್ಲಿ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಪಡೆಯಲು ಭಾರತೀಯರು ಕೇವಲ 1 ಅಂಕದಿಂದ ವಿಫಲರಾಗಿದ್ದಾರೆ. ಅಂದರೆ 4ನೇ ಸ್ಥಾನ ಪಡೆದಿರುವ ಜರ್ಮನಿಯು ಶೂಟರ್ಗಳು ಒಟ್ಟು 629.7 ಅಂಕಗಳನ್ನು ಕಲೆಹಾಕಿ ಅರ್ಹತೆ ಪಡೆದುಕೊಂಡಿದ್ದಾರೆ. ಇದೇ ವೇಳೆ 6ನೇ ಸ್ಥಾನ ಪಡೆದ ರಮಿತಾ ಮತ್ತು ಅರ್ಜುನ್ 628.7 ಅಂಕಗಳನ್ನು ಕಲೆಹಾಕಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.