ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಪಟು ಮನೀಷಾ ರಾಮದಾಸ್, ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ಎಸ್ಯು5 ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿರುವ ಮನೀಷಾ, ಸೆಮಿಫೈನಲ್ಗೆ ಪ್ರವೇಶಿಸಿ ಪದಕದ ನಿರೀಕ್ಷೆ ಮೂಡಿಸಿದ್ದಾರೆ.
19 ವರ್ಷದ ಮನೀಷಾ ಅವರು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜಪಾನ್ನ ಮಾಮಿಕೊ ಟೊಯೊಡಾ ವಿರುದ್ಧ 21-13, 21-16ರ ಅಂತರದ ಗೆಲುವು ಗಳಿಸಿದರು. ಎರಡನೇ ಶ್ರೇಯಾಂಕ ಪಡೆದಿರುವ ಮನೀಷಾ, 30 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡರು. ಮತ್ತೊಂದೆಡೆ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಎಸ್ಎಲ್3 ವಿಭಾಗದಲ್ಲಿ ಮನದೀಪ್ ಕೌರ್ ಮತ್ತು ಎಸ್ಎಲ್4 ವಿಭಾಗದಲ್ಲಿ ಪಾಲಕ್ ಕೊಹ್ಲಿ ಸೋಲು ಅನುಭವಿಸಿದ್ದು ನಿರ್ಗಮಿಸಿದ್ದಾರೆ.