ಪ್ಯಾರಾಲಿಂಪಿಕ್ಸ್ನ ಪುರುಷರ ಹೈಜಂಪ್ ಟಿ–47 ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಟೊಕಿಯೊ ಒಲಿಂಪಿಕ್ಸ್ನಲ್ಲಿ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ ನಿಶಾದ್, ಹಾಲಿ ಋತುವಿನಲ್ಲಿ 2.04 ಮೀಟರ್ ಎತ್ತರಕ್ಕೆ ಜಿಗಿದು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಅಮೆರಿಕದ ರೊಡೆರಿಕ್ ಟೌನ್ಸೆಂಡ್ 2.12 ಮೀಟರ್ ಎತ್ತರಕ್ಕೆ ಜಿಗಿದು ಚಿನ್ನದ ಪದಕ ಗೆದ್ದುಕೊಂಡರೆ, ಜಾರ್ಜಿ ಮಾರ್ಗೀವ್ (2.00 ಮೀಟರ್) ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕಗಳ ಸಂಖ್ಯೆ 7ಕ್ಕೆ (1 ಚಿನ್ನ, 2 ಬೆಳ್ಳಿ, 4 ಕಂಚು) ಏರಿಕೆಯಾಗಿದೆ. ಪದಕ ಪಟ್ಟಿಯಲ್ಲಿ ಭಾರತ 27ನೇ ಸ್ಥಾನದಲ್ಲಿದೆ.