ಆಂಧ್ರ ಪ್ರದೇಶ ಎನ್ಡಿಎ ಸರ್ಕಾರ ಪತನ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ತಮ್ಮದೇ ಸರ್ಕಾರದ ವಿರುದ್ಧ ಆಂಧ್ರ ಪ್ರದೇಶದ ಡಿಸಿಎಂ ಆಗಿರೋ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮದೇ ಗೃಹ ಮಂತ್ರಿ ವಿರುದ್ಧ ಕಿಡಿ ಕಾರಿದ್ದಾರೆ ಪವನ್ ಕಲ್ಯಾಣ್. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಆಂಧ್ರ ಗೃಹ ಸಚಿವೆ ಅನಿತಾ ವಿರುದ್ಧ ನೇರಾ ಆರೋಪ ಮಾಡಿದ್ದಾರೆ ಪವನ್ ಕಲ್ಯಾಣ್.
ಆಂಧ್ರದಲ್ಲಿ ಅತ್ಯಾಚಾರಿಗಳು ಮತ್ತು ಕ್ರಿಮಿನಲ್ಗಳ ಧೈರ್ಯ ಹೆಚ್ಚಾಗಿದೆ, ಯಾಕಂದ್ರೆ ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಈಗ ಗೃಹ ಸಚಿವೆ ಅನಿತಾ ಮತ್ತಷ್ಟು ಹೆಚ್ಚು ಕ್ರಿಯಾಶೀಲ ಆಗಬೇಕು ಎಂದಿದ್ದಾರೆ. ನಾನು ಗೃಹ ಸಚಿವ ಆಗಿದ್ರೆ ಪರಿಸ್ಥಿತಿ ಬೇರೆ ರೀತಿ ಇರ್ತಿತ್ತು ಎಂದು ಮಹಿಳೆಯರ ವಿರುದ್ಧದ ಘಟನೆಗಳಿಂದ ಪವನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತಹಶಿಲ್ದಾರ್ ಕಾಟಕ್ಕೆ ಬೇಸತ್ತು ಸರ್ಕಾರಿ ನೌಕರ ಆತ್ಮಹತ್ಯೆ..!
ಗೃಹ ಸಚಿವೆ ಅನಿತಾ, ಟಿಡಿಪಿಯ ದೊಡ್ಡ ನಾಯಕಿ ಹಾಗೂ ಸಿಎಂ ಚಂದ್ರಬಾಬು ನಾಯ್ಡು ಅವರಿಗೂ ಸಹ ಆಪ್ತರಾಗಿದ್ದರೂ ಸಹ ಪವನ್ ಕಲ್ಯಾಣ್ ಸಿಟ್ಟಾಗಿದ್ದಾರೆ. ತಮ್ಮದೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಡಿಸಿಎಂ ಪವನ್ ಕಲ್ಯಾಣ್.