ಜನರ ರಕ್ಷಣೆ ಮಾಡಬೇಕಿದ್ದ ಆರಕ್ಷಕರೇ ಭಕ್ಷಕರಾದ್ರಾ ಅನ್ನೋ ಅನುಮಾನ ಮೂಡ್ತಿದೆ. ಸರ್ಕಾರಿ ಉದ್ಯೋಗದಲ್ಲಿರುವ ಉದ್ಯೋಗಿಗಳಿಗೆ ಅಂಚೆ ಮತದಾನದ ಮುಖಾಂತರ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಮತದಾನ ಮಾಡಲು ಮುಂದಾಗಿದ್ದರು. ಮತದಾನದ ಬಳಿಕ KA 22 1038 ಎಂಬ ವಾಹನದಲ್ಲಿ ಬಂದ ಕೆಲ ಪೊಲೀಸರು ಮದ್ಯಸೇವನೆ ಮಾಡಿ ಗಲಾಟೆ ಮಾಡಿಕೊಂಡಿದ್ದಾರೆ. ಮಟಮಟ ಮಧ್ಯಾಹ್ನವೇ ಗಂಟಲುಪೂರ್ತಿ ಕುಡಿದ ಪೊಲೀಸರು ಹೋಟೆಲ್ನಲ್ಲಿ ಗಲಾಟೆ ಮಾಡಲು ಮುಂದಾಗಿದ್ದಾರೆ. ಕೂಡಲೇ ಸ್ಥಳೀಯರು ಗ್ಯಾರಂಟಿ ನ್ಯೂಸ್ಗೆ ಕರೆ ಮಾಡಿ ಪೊಲೀಸರ ದಾಂಧಲೆ ಕುರಿತಂತೆ ಮಾಹಿತಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಗ್ಯಾರಂಟಿ ನ್ಯೂಸ್ ತಂಡ, ಪೊಲೀಸರು ಮಾಡುತ್ತಿರುವ ಗಲಾಟೆ ಕುರಿತಂತೆ ಶೂಟ್ ಮಾಡಲು ಮುಂದಾಯ್ತು. ಈ ವೇಳೆ ಕ್ಯಾಮರಾಮೆನ್ ಹಾಗೂ ಕ್ಯಾಮರಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಕಾನೂನನ್ನು ಕಾಪಾಡಬೇಕಿದ್ದ ಪೊಲೀಸರೇ ಕಾನೂನು ಉಲ್ಲಂಘಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕೂಡಲೇ ಉನ್ನತ ಪೊಲೀಸ್ ಅಧಿಕಾರಿಗಳು ಕುಡಿದು ಗಲಾಟೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.