ಕಾಂಗ್ರೆಸ್ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಡಿ ಐಟಿ ಯನ್ನ ಸರ್ಜಿಕಲ್ ಸ್ಟ್ರೈಕ್ ತರ ಬಳಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಸರ್ಕಾರಿ ನೌಕರ, ಅಮಾಯಕ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯೆಗೆ ಸರ್ಕಾರವೇ ಕಾರಣ, ಆಡಳಿತದಲ್ಲಿ ಸಂಪೂರ್ಣ ಲೋಪವಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನೂ ಪರಿಶಿಷ್ಟ ಪಂಗಡದ ಹಣ ಉದ್ಯೋಗ, ಶಿಕ್ಷಣ, ರೈತರಿಗೆ ತಲುಪಬೇಕಿತ್ತು ಆದರೆ ಸರ್ಕಾರ ಬಂದು 1 ವರ್ಷ ಆದ್ರು ಒಬ್ಬರಿಗು ತಲುಪಿಲ್ಲ. ಸರ್ಕಾರ ಬದುಕಿದ್ಯೋ ಸತ್ತಿದ್ಯೋ, ಸರ್ಕಾರದ ಮುಖ್ಯಸ್ಥರ ಸಹಕಾರ ಇಲ್ಲದೆ, ಸಚಿವರ ಸಹಕಾರ ಇಲ್ಲದೆ ಹಣ ವರ್ಗಾವಣೆ ಆಗಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ತನಿಖೆ ಆಗ್ತಿರಬೇಕಾದ್ರೆ ಹಣ ಎಲ್ಲಿ ಹೋಗಿದೆ ಅಂತ ED, CBI ನಿಂದ ತನಿಖೆ ಆಗ್ತಿದೆ. ತನಿಖೆ ನಡೆಯುತ್ತಿರುವಾಗ ಮುಂಜಾಗ್ರತೆ ಇಂದ ಆಂಟಿಸಿಪೇಟ್ರಿ ಬೇಲ್ ತಗೊಂಡು ಸಚಿವರು ಗ್ರಾಜ್ಯುಟಿ ಸಂಸ್ಥೆಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ವ್ಯವಸ್ಥೆ ನಡೆಸೋರೇ ಈ ರೀತಿ ಭಾಷೆ ಮಾತಾಡಿದ್ದಾರೆ. ಜವಾಬ್ದಾರಿ ಇಲ್ಲದ ಈ ಹೇಳಿಕೆಯನ್ನು ಸಚಿವರು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಇನ್ನೂ ಸಿಎಂ, ಡಿಸಿಎಂ ಹೆಸರು ಹೇಳುವಂತೆ ED ಒತ್ತಡ ಹಾಕ್ತಿರುವ ಆರೋಪಕ್ಕೆ ಉತ್ತರಿಸಿದ ಮಾಜಿ ಸಚಿವರು, ಅದೇಗೆ ಒತ್ತಡ ಹಾಕಲಾಗುತ್ತೆ, ಉಪ್ಪು ತಿಂದಿದ್ದಾರೆ, ಹಣ ಲೂಟಿ ಒಡೆದಿದ್ದಾರೆ, ತಪ್ಪು ಮಾಡಿದ್ದಕ್ಕೆ ತನಿಖೆಗೆ ಕರೆದಿರೋದು, ತಪ್ಪು ಮಾಡೇ ಇಲ್ಲ ಅಂತ ಸಿಎಂ ಸದನದಲ್ಲೇ ಹೇಳ್ತಾರೆ. ವ್ಯವಸ್ಥೆಗಳನ್ನು ಪ್ರಶ್ನೆ ಮಾಡಲು ನ್ಯಾಯಾಂಗ ಇದೆ, ಅಲ್ಲಿಗೆ ಹೋಗಬಹುದು ಎಂದು ತಿರುಗೇಟನ್ನು ಕೊಟ್ಟಿದ್ದಾರೆ.
75% ವಿಪಕ್ಷಗಳ ಮೇಲೆ IT,ED ದಾಳಿಯಾಗ್ತಿದೆ, ಬಿಜೆಪಿ ಮೇಲೆ ಏಕೆ ದಾಳಿ ಆಗ್ತಿಲ್ಲ ಎಂಬ ವಿಚಾರಕ್ಕೆ ಮಾತಾಡಿದ ಮಾಜಿ ಸಚಿವರು, ಪ್ರಧಾನಿ ಮೋದಿ ಈ ಬಗ್ಗೆ ಪಾರ್ಲಿಮೆಂಟ್ ನಲ್ಲೇ ಉತ್ತರ ಕೊಟ್ಟಿದ್ದಾರೆ. ಅವರದೇ ಸರ್ಕಾರ ಇದ್ದಾಗ ED ಇಂದ ಎಷ್ಟು ಹಣ ವಶವಾಗಿತ್ತು? ನಮ್ಮ ಸರ್ಕಾರ 10 ವರ್ಷದಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಹಣ ವಶವಾಗಿದೆ. ಅವರ ಲೋಕಸಭಾ ಸದಸ್ಯರ ಮನೆಯಲ್ಲಿ 400 ಕೋಟಿ ಸಿಕ್ಕಿರೋದು. ಇವರ ಸತ್ಯ ಹೊರಗೆ ಬಂದ್ರೆ ಭ್ರಷ್ಟಾಚಾರ ಗೊತ್ತಾಗುತ್ತೆ. ಅದನ್ನ ಡಿಫೆಂಡ್ ಮಾಡಿಕೊಳ್ಳಲು, ರಕ್ಷಣೆಗಾಗಿ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ನವರ ಭ್ರಷ್ಟಾಚಾರ ಎದ್ದು ಕಾಣ್ತಿದೆ ತನಿಖೆಯಲ್ಲಿ ಸತ್ಯ ಹೊರಗೆ ಬರಲಿದೆ ಎಂದರು.