ಸ್ವಾತಂತ್ರ್ಯದ ನಂತರ ರಷ್ಯಾದೊಂದಿಗಿನ ನಮ್ಮ ಇತಿಹಾಸವನ್ನು ನೋಡಿದರೆ ನಮ್ಮ ಹಿತಾಸಕ್ತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ರಷ್ಯಾ ಎಂದಿಗೂ ಏನನ್ನೂ ಮಾಡಿಲ್ಲ ಎಂದು ನಾನು ಹೇಳಬಲ್ಲೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಹೋಗುತ್ತಿದ್ದಾರೆ. ಇಂದು ರಷ್ಯಾದ ಪರಿಸ್ಥಿತಿಯು ವಿಭಿನ್ನವಾಗಿದೆ ಎಂದು ನಾನು ಭಾವಿಸುತ್ತೇನೆ. ಪಾಶ್ಚಿಮಾತ್ಯ ದೇಶಗಳ ಜೊತೆ ಬಹುತೇಕ ರಷ್ಯಾದ ಸಂಬಂಧ ಮುರಿದು ಬಿದ್ದಿದೆ. ರಷ್ಯಾ ಈಗ ಏಷ್ಯಾದ ದೇಶಗಳತ್ತ ಹೆಚ್ಚು ವಾಲುತ್ತಿದೆ. ಏಷ್ಯಾದ ದೇಶವಾಗಿರುವ ನಾವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಮಗೆ ಇಂದು ಒಳ್ಳೆಯದಾಗುತ್ತಿದೆ. ರಷ್ಯಾವು ಪ್ರಮುಖ ನೈಸರ್ಗಿಕ ಸಂಪನ್ಮೂಲ ಶಕ್ತಿಯಾಗಿದ್ದು ನಾವು ದೊಡ್ಡ ಗ್ರಾಹಕರಾಗಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ; ರಷ್ಯಾಗೆ ತೆರಳಿದ ಪ್ರಧಾನಿ ಮೋದಿ..!
ಹಿಂದೆ ಪಶ್ಚಿಮದ ರಾಷ್ಟ್ರಗಳು ವಿಶ್ವದಲ್ಲಿ ಪ್ರಾಬಲ್ಯವನ್ನು ಹೊಂದಿದ್ದವು. ಆದರೆ ಕಳೆದ 20-25 ವರ್ಷಗಳಲ್ಲಿ ಪಾಶ್ಚಿಮಾತ್ಯೇತರ ದೇಶಗಳು ವಿಶ್ವಕ್ಕೆ ಕೊಡುಗೆ ನೀಡುತ್ತಿವೆ. ಇದರಿಂದಾಗಿ ಮರು ಸಮತೋಲನ, ಬಹುಧ್ರುವೀಯತೆ ಆರಂಭವಾಗಿದೆ ಎಂದರು.