- ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮೇ 31 ಕ್ಕೆ ಮುಂದೂಡಿಕೆ
- ಪ್ರಜ್ವಲ್ ರೇವಣ್ಣಪರ ವಕೀಲ ಅರುಣ 3 ಪ್ರಕರಣಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು
ಬೆಂಗಳೂರು: ಹಾಸನ ಸಂಸದ ಪ್ರಜ್ವಲ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಮೇ 31 ಕ್ಕೆ ಮುಂದೂಡಿಕೆ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಜ್ವಲ ರೇವಣ್ಣ ಪರ ವಕೀಲ ಅರುಣ 3 ಪ್ರಕರಣಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆನ್ನು ನಾಳೆಯೇ ನಡೆಸುವಂತೆ ಪ್ರಜ್ವಲ ರೇವಣ್ಣ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಜಾಮೀನು ಅರ್ಜಿ ಓದಲು ಅವಕಾಶ ನೀಡಿದ ನ್ಯಾಯಮೂರ್ತಿ ಸಂತೋಷ್ ಭಟ್ ತಕ್ಷಣಕ್ಕೆ ನಿರೀಕ್ಷಣಾ ಜಾಮೀನು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿ, ಮೇ 31 ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.