- ಹೆಚ್.ಡಿ ರೇವಣ್ಣ ಬಂಧನ ಬೆನ್ನಲ್ಲೆ ಭವಾನಿ ರೇವಣ್ಣ ಅರೆಸ್ಟ್ ಆಗ್ತಾರಾ..?
- ಭವಾನಿ ರೇವಣ್ಣಗೆ ಈಗಾಗಲೇ ನೋಟೀಸ್ ನೀಡಿದ ಎಸ್ಐಟಿ
- ಎಸ್ಐಟಿ ತನಿಖೆಗೆ ಸ್ಪಂದಿಸದ ಹಿನ್ನೆಲೆ ಅರೆಸ್ಟ್ ಆಗೋ ಸಾಧ್ಯತೆ
ಬೆಂಗಳೂರು: ಮಹಿಳೆ ಕಿಡ್ನಾಪ್ ಕೇಸ್ ವಿಚಾರವಾಗಿ ಶಾಸಕ ಹೆಚ್ ಡಿ ರೇವಣ್ಣ ಬಂಧನದ ಬೆನ್ನಲ್ಲೆ ಭವಾನಿ ರೇವಣ್ಣ ಅವರನ್ನು ಅರೆಸ್ಟ್ ಮಾಡಲಾಗುತ್ತಾ? ಎಂಬ ಚರ್ಚೆ ಶುರುವಾಗಿದೆ.
ಈಗಾಗಲೇ ಭವಾನಿ ರೇವಣ್ಣಗೆ ಎಸ್ಐಟಿ ನೋಟೀಸ್ ನೀಡಿದ್ದು, ತನಿಖೆಗೆ ಸ್ಪಂದಿಸದ ಹಿನ್ನೆಲೆ ಬಂಧನಕ್ಕೋಳಗಾಗೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಪೆನ್ ಡ್ರೈವ್ ಪ್ರಕರಣ ಸಂಕಷ್ಟದ ಮೇಲೆ ಸಂಕಷ್ಟ ತರುತ್ತಲೇ ಇದೆ. ಹೊಳೆನರಸೀಪುರದಲ್ಲಿ ಮನೆ ಕೆಲಸದಾಕೆ ದಾಖಲಿಸಿದ್ದ ಪ್ರಕರಣ ಸಂಬಂಧ ಇದೀಗ ರೇವಣ್ಣ ಪತ್ನಿ ಭವಾನಿ ರೇವಣ್ಣಗೂ ವಿಶೇಷ ತನಿಖಾ ತಂಡ ನೋಟಿಸ್ ರವಾನಿಸಿ ಶನಿವಾರದ ಒಳಗಡೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು.
ಈ ಮಧ್ಯೆ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಸ್ಥಳಗಳ ಮೇಲೆ ಎಸ್ಐಟಿ ರೇಡ್ ಮಾಡಿದೆ. ಗುರುವಾರ ತಡರಾತ್ರಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆ, ಹೊಳೆನರಸೀಪುರದ ಪಡುವಲಹಿಪ್ಪೆಯ ಫಾರ್ಮ್ ಹೌಸ್, ಪ್ರಜ್ವಲ್ರೇವಣ್ಣಗೆ ಸೇರಿದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದರು.
ಎಸ್.ಪಿ. ಸೀಮಾ ಲಾಠ್ಕರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಕೆಲವೊಂದು ಮಹತ್ವದ ಸಾಕ್ಷಿಗಳನ್ನು ಕಲೆ ಹಾಕಿದೆ. ಫಾರ್ಮ್ಹೌಸ್ನಲ್ಲಿದ್ದ ಕಾರ್ಮಿಕರನ್ನೂ ವಿಚಾರಣೆಗೆ ಒಳಪಡಿಸಿದೆ.