ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್ ದೇಶದೆಲ್ಲೆಡೆ ಭಾರೀ ಸದ್ದು ಮಾಡ್ತಿದೆ. ಇದರ ನಡುವೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇನ್ನು ಮುಂದೇ ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರದ್ದು ಸಿಡಿ ಬರಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನಾನು ಮೊದಲಿನಿಂದಲೇ ಹೇಳಿಕೊಂಡು ಬಂದಿದ್ದೆ. ಆಗ ಎಲ್ಲರೂ ನನ್ನ ಹೇಳಿಕೆ ನಿರ್ಲಕ್ಷ್ಯ ಮಾಡುತ್ತಾ ಬಂದರು. ಇವತ್ತು ಒಬ್ಬರಿಗೆ ಆಗಿದೆ ಮುಂದೆ ಸಿದ್ದರಾಮಯ್ಯಗೂ, ಪರಮೇಶ್ವರ ಅವರಿಗೂ ಬರಬಹುದು. ದಯವಿಟ್ಟು ಸಿಎಂ, ಗೃಹ ಸಚಿವರು ಪಕ್ಷಾತೀತವಾಗಿ ಇದಕ್ಕೆ ಇತಿಶ್ರೀ ಹಾಡಬೇಕು. ಸಿಎಂ ಅವರನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು