ಮಗಾ… ಪ್ರಜ್ವಲ್ ಲಿಂಕ್ ಕಳ್ಸೋ ಅಂತ ಕೇಳೋರು ಇನ್ಮುಂದೆ ಸ್ವಲ್ಪ ಎಚ್ಚರವಾಗಿರಿ. ನಿಮ್ ಫ್ರೆಂಡ್.. ಮಚ್ಚ ವಿಡಿಯೋ ಕಳಿಸ್ತೀನಿ ನೋಡು..ಅನ್ನೋರು ಈ ಸ್ಟೋರಿಯನ್ನ ಓದಲೇಬೇಕು. ಹೌದು, ಪ್ರಜ್ವಲ್ ಕಾಮಲೀಲೆ “ಲಿಂಕ್” ಕೇಳಿದ್ರೆ ನಿಮಗೆ ಜೈಲೂಟ ಫಿಕ್ಸ್. ಪ್ರಜ್ವಲ್ “ಸ್ಕ್ಯಾಂಡಲ್” ಲಿಂಕ್ ಶೇರ್ ಮಾಡಿದ್ರೆ ನೀವು ಲಾಕ್ ಆಗೋದು ಗ್ಯಾರಂಟಿ. ಪ್ರಜ್ವಲ್ ವಿಡಿಯೋ ಶೇರ್ ಮಾಡೋರ ಮೇಲೆ ನಿಗಾ ವಹಿಸಲು ತೀರ್ಮಾನಿಸಲಾಗಿದೆ. ಸಂತ್ರಸ್ತೆಯರ ನೆರವಿಗೆ ಧಾವಿಸಿದ ಎಸ್ ಐಟಿ, ಲಿಂಕ್ ಶೇರ್ ಮಾಡಿದ್ರೆ ಜೈಲೂಟ ತಿನಿಸಲು ಮುಂದಾಗಿದೆ. ಈ ವಿಚಾರವಾಗಿ ಅಧಿಕೃತ ಆದೇಶ ಹೊರಡಿಸಿದ ಎಸ್ ಐಟಿ. ಲಿಂಕ್ ಶೇರ್ ಮಾಡೋರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೈಬರ್ ಪೊಲೀಸರಿಗೂ ಸೂಚನೆ ನೀಡಲಾಗಿದೆ.