- ನೊಟೀಸ್ ನೀಡಿದ್ರೂ ವಿಚಾರಣೆಗೆ ಬಾರದ ಪ್ರಜ್ವಲ್
- ಅರೆಸ್ಟ್ ವಾರಂಟ್ ಪುರಸ್ಕರಿಸಿದ ನ್ಯಾಯಾಲಯ
- ದೇಶಿ ಬ್ಯಾಂಕ್ ಖಾತೆ ಸೀಜ್ ಮಾಡೋದಕ್ಕೆ ಸಿದ್ಧತೆ
ಅಶ್ಲೀಲ ವಿಡಿಯೋ ವೈರಲ್, ಪೆನ್ ಡ್ರೈವ್ ಪ್ರಕರಣದ ಜೊತೆಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಈ ಸಾರಿ ಲಾಕ್ ಆಗೋದು ಪಕ್ಕಾ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಹಲವು ಬಾರಿ ನೊಟೀಸ್ ನೀಡಿದ್ರೂ ವಿಚಾರಣೆಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅರೆಸ್ಟ್ ವಾರಂಟ್ ಜಾರಿ ಮಾಡಲು SIT ಮನವಿ ಮಾಡಿತ್ತು ಈ ಮನವಿಯನ್ನು 42ನೇ ಎಸಿಎಂಎಂ ನ್ಯಾಯಾಲಯ ಪುರಸ್ಕರಿಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈಗ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಆಗಿದೆ. ಆದ್ರೆ ವಾರಂಟ್ ಅನ್ವಯ ಪ್ರಜ್ವಲ್ ರೇವಣ್ಣ ಭಾರತದ ಯಾವ ಮೂಲೆಯಲ್ಲಿ ಕಾಲಿಟ್ಟರೂ SIT ಬಂಧಿಸಬಹುದು.
ಕಳೆದ ಏಪ್ರಿಲ್ 27ರಂದು ವಿದೇಶದಲ್ಲಿ ತಲೆಮರಿಸಿಕೊಂಡಿರುವ ಪ್ರಜ್ವಲ್ ವಾಪಸ್ ಕರೆತರೋದಕ್ಕೆ ಎಸ್ಐಟಿ ನಿರಂತರ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ಪ್ರಜ್ವಲ್ ರೇವಣ್ಣ ಅವರ ವಿದೇಶಿ ಖಾತೆಗೆ ಲಕ್ಷ, ಲಕ್ಷ ಹಣ ವರ್ಗಾವಣೆ ಆಗಿರುವ ಅನುಮಾನಗಳಿವೆ. ಹೀಗಾಗಿ ಅವರ ದೇಶಿ ಬ್ಯಾಂಕ್ ಖಾತೆಗೆ ಸೀಜ್ ಮಾಡೋದಕ್ಕೆ ಸಿದ್ಧತೆ ನಡೆಸಲಾಗಿದೆ.
ಈ ಅರೆಸ್ಟ್ ವಾರಂಟ್ ನಿಂದ ಆರೋಪಿ ವಿದೇಶದಲ್ಲಿದ್ದಾಗ ಈ ವಾರಂಟ್ ಮೇಲೆ ಬಂಧಿಸುವಂತಿಲ್ಲ. ಆದರೆ ನಮ್ಮ ದೇಶದ ಗಡಿ ಒಳಗೆ ಬಂದಾಗ ಮಾತ್ರವೇ ಅರೆಸ್ಟ್ ಮಾಡಲು ಸಾಧ್ಯವಿದೆ. ಇದರ ಜೊತೆಗೆ ರೆಡ್ ಕಾರ್ನರ್ ನೋಟಿಸ್ ಬಗ್ಗೆ ಕೂಡಾ ಚರ್ಚೆ ನಡೆಸಲಾಗುತ್ತಿದೆ. ರೆಡ್ ಕಾರ್ನರ್ ನೊಟೀಸ್ ನೀಡಲು ಚಾರ್ಜ್ ಶೀಟ್ ಮುಖ್ಯವಾಗಿದೆ. ಮೊದಲು ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಬೇಕು ಇದಾದ ಬಳಿಕ ರೆಡ್ ಕಾರ್ನರ್ ನೊಟೀಸ್ ಹೊರಡಿಸುವ ಸಾಧ್ಯತೆ ಇದೆ.