- ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಭೇಟಿ
- ಮೂವರು ಮಹಿಳಾ ಅಧಿಕಾರಿಗಳಿಗೆ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ಧ ದೂರನ್ನ ಕೊಡಿ ಎಂದು ಒತ್ತಡ ಹೇರಲಾಗ್ತಿದೆ
ಪ್ರಜ್ವಲ್ ರೇವಣ್ಣ ಕೇಸ್.. ದಿನಕ್ಕೊಂದು ದಿಕ್ಕು.. ಗಂಟೆಗೊಂದು ತಿರುವು ಪಡೆದುಕೊಳ್ತಿದೆ.. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಮೇಲೆ ಒಬ್ಬೊಬ್ಬರೇ ಮಹಿಳೆಯರು ನಮಗೆ ಅನ್ಯಾಯ ಆಗಿದೆ ಅಂತ ಬಂದು ಕಂಪ್ಲೆಂಟ್ನ್ನ ಕೊಡ್ತಿದ್ದಾರೆ. ಅದರ ನಡುವೆ ಇಡೀ ಪ್ರಕರಣಕ್ಕೆ ಒಂದು ರೋಚಕವಾದ ಟ್ವಿಸ್ಟ್ ಸಿಕ್ಕಿದೆ.. ಪ್ರಜ್ವಲ್ ರೇವಣ್ಣ ವಿರುದ್ಧ ಕಂಪ್ಲೆಂಟ್ ಕೊಡಿ ಅಂತ ಕಾಣದ ಕೈ ಗಳಿಂದ ಒತ್ತಡ ಹೇರಲಾಗ್ತಿದೆಯಾ.? ಹೀಗೊಂದು ಅನುಮಾನ ಹುಟ್ಟಿಕೊಳ್ತಿದೆ.
ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಒಂದು ಮಹಾಷಡ್ಯಂತ್ರವೇ ನಡೆದಿರೋದು ಇದೀಗ ಬಯಲಾಗಿದೆ.. ಇದುವರೆಗೂ ಕೂಡ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣರಿಂದ ನಮಗೆ ಇಂತಹ ತೊಂದ್ರೆ ಆಗಿದೆ. ನನ್ನನ್ನ ಕಿಡ್ನಾಪ್ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅಂತ ಒಬ್ಬರೇ ಒಬ್ಬ ಮಹಿಳೆಯೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹೋಗಿ ದೂರನ್ನ ಕೊಟ್ಟಿಲ್ಲ.
ಬದಲಾಗಿ ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳು, ಸಿವಿಲ್ ಡ್ರೆಸ್ನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಭೇಟಿಯನ್ನ ಕೊಡ್ತಾರೆ. ಆ ಮೂವರು ಮಹಿಳಾ ಅಧಿಕಾರಿಗಳು ಪ್ರಜ್ವಲ್ ವಿರುದ್ಧ ದೂರನ್ನ ಕೊಡೋದಕ್ಕೆ ಹೋಗಿದ್ದಲ್ಲ. ಬದಲಾಗಿ ತಮ್ಮ ಮೇಲೆ ಒತ್ತಡ ಹೇರಲಾಗ್ತಿದೆ ಅಂತ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರನ್ನ ಕೊಡ್ತಾರೆ.
ಯಾರಿಂದ ಒತ್ತಡ.? ಏನ್ ಒತ್ತಡ ಅಂತ ಕೇಳಿದ್ರೇ ಕಂಡಿತಾ ನೀವು ಶಾಕ್ ಆಗ್ತೀರಾ.. ಆ ಮೂವರು ಮಹಿಳಾ ಅಧಿಕಾರಿಗಳಿಗೆ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ಧ ದೂರನ್ನ ಕೊಡಿ ಅನ್ನೋ ಒತ್ತಡವನ್ನ ಹೇರಲಾಗ್ತಿದೆಯಂತೆ.
ಅಂದ್ರೆ ಪ್ರಜ್ವಲ್ ವಿರುದ್ಧ ದೂರನ್ನ ಕೊಡಬೇಕು ಅಂತ ಕಾಣದ ಕೈಗಳು ಅವರ ಮೇಲೆ ಒತ್ತಡವನ್ನ ಹಾಕಿದ್ದಾರೆ. ಹೀಗಾಗಿ ಆ ಮೂವರು ರಾಷ್ಟ್ರೀಯ ಮಹಿಳಾ ಆಯೋಗವನ್ನ ಭೇಟಿಯಾಗಿ ನಮಗೆ ಹೀಗೆ ದೂರನ್ನ ಕೊಡುವಂತೆ ಒತ್ತಡವನ್ನ ಹೇರಲಾಗ್ತಿದೆ ಅನ್ನೋ ಆರೋಪವನ್ನ ಮಾಡಿದ್ದಾರೆ. ಅಂದ್ರೆ ರೇವಣ್ಣ ಕುಟುಂಬದ ವಿರುದ್ಧ ಒಂದು ದೊಡ್ಡ ಷಡ್ಯಂತ್ರವೇ ನಡೆದಿದೆ. ಷಡ್ಯಂತ್ರ ನಡೆಸಿದ್ದು ಯಾರು.? ಯಾರಿಂದ ಒತ್ತಡ ಹೇರಲಾಗ್ತಿದೆ ಅನ್ನೋ ಕುತೂಹಲ ಶುರುವಾಗಿದೆ.