ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಕಾನೂನಿಗಿಂತ ಯಾರೂ ದೊಡ್ಡವರು ಇಲ್ಲ. ಅಂತಿಮವಾಗಿ ಎಸ್ಐಟಿ ವರದಿ ಬಂದ ಮೇಲೆ ಕಾನೂನು ಕ್ರಮ ಆಗಲಿದೆ. ಅದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡೋಕೆ ಆಗೊಲ್ಲ ಎಂದು ಹೇಳಿದ್ದಾರೆ.
ಈ ಒಂದು ಪ್ರಕರಣವನ್ನು ರಾಜಕೀಯವಾಗಿ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಡುತ್ತಿದ್ದಾರೆ. ದೇವೇಗೌಡರ ಜೀವನ ತೆರೆದ ಪುಸ್ತಕವಾಗಿದೆ. ದೇವೇಗೌಡರು, ನಮ್ಮ ಅಜ್ಜಿ ಯುವಕರಿಗೆ ಸ್ಫೂರ್ತಿ. ದಂಪತಿ ಯಾವ ರೀತಿ ಬದುಕಿ ಬಾಳಬೇಕು ಎಂಬುವುದಕ್ಕೆ ಅವರೇ ಉದಾಹರಣೆ ಎಂದರು.
ದಯಮಾಡಿ ನಾನು ಕೈ ಜೋಡಿಸಿ ಮನವಿ ಮಾಡ್ತೀನಿ.. ದೇವೇಗೌಡರು ಈ ಎಲ್ಲ ವಿಷಯ ಕೇಳಿದ ಮೇಲೆ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಯಾರೂ ಸಹ ಊಹೆ ಮಾಡೋಕೆ ಆಗಲ್ಲ. ಅವರು ಎಲ್ಲರಿಗಿಂತ ಸಾಕಷ್ಟು ನೊಂದಿದ್ದಾರೆ. ದೇವೇಗೌಡರು, ನಮ್ಮ ಅಜ್ಜಿ ಬಹಳ ನೊಂದಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.