ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರಿಗೆ ಕುಮಾರಸ್ವಾಮಿ ವಿರುದ್ಧ ಬದ್ಧ ರಾಜಕೀಯ ದ್ವೇಷ ಇದೆ, ಲೋಕಸಭಾ ಚುನಾವಣೆಯಿಂದಲೂ ಕುಮಾರಸ್ವಾಮಿಯವರು ಕಾಂಗ್ರೆಸ್ ವಿರುದ್ಧ ಭಾಷಣಗಳನ್ನು ಮಾಡಿದ್ದು ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಹೆಚ್ಡಿಕೆ ಪರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭರ್ಜರಿ ಬ್ಯಾಟ್ ಬೀಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತಾಡಿದ ಪ್ರಲ್ಹಾದ್ ಜೋಶಿ, ಸಿಎಂ, ಡಿಸಿಎಂ ಅವರು ಕುಮಾರಸ್ವಾಮಿಯವರನ್ನು ರಾಜಕೀಯ ಮುಗಿಸುವ ಷಡ್ಯಂತ್ರ ಮಾಡುತ್ತಿದ್ದಾರೆ, 2018ರಲ್ಲಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿ ನಂತರ ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರ ಉರುಳುವಂತೆ ಮಾಡಿದ್ದು ಅವರೇ ಎಂದು ಜೋಶಿ ಹೇಳಿದರು. 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಪಾಲರೇ ಇದ್ದರಲ್ಲ, ಅಗ ಯಾಕೆ ಕುಮಾರಸ್ವಾಮಿಯವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಲಿಲ್ಲ ಎಂದು ಕೇಂದ್ರ ಸಚಿವ ಜೋಶಿ ಪ್ರಶ್ನಿಸಿದರು.