- ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧ ಮೂವರನ್ನು ಎನ್ಐಎ ತಂಡ ಇಂದು ವಶಕ್ಕೆ ಪಡೆದಿದೆ.
- ಆರೋಪಿಗಳಿಗೆ ಆಶ್ರಯ ನೀಡಿದ್ದ ಕಾರಣಕ್ಕೆ ಸಿರಾಜ್ನನ್ನು ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧ ಮೂವರನ್ನು ಎನ್ಐಎ ತಂಡ ಇಂದು ವಶಕ್ಕೆ ಪಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಆನೆಮಹಲ್ ನಲ್ಲಿ ಸುಳ್ಯದ ಮೊಹ್ಮದ್ ಮುಸ್ತಾಫ್ ಅಲಿಯಾಸ್ ಮುಸ್ತಾಫ್ ಪೈಚಾರ್, ಸೋಮವಾರಪೇಟೆಯ ಇಲಿಯಾಸ್ ಹಾಗೂ ಸಿರಾಜ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಆನೆಮಹಲ್ ನ ಸಿರಾಜ್ ಬಳಿ ಮೊಹ್ಮದ್ ಮುಸ್ತಾಫಾ ಹಾಗೂ ಇಲಿಯಾಸ್ ಕೆಲಸಕ್ಕೆ ಸೇರಿದ್ದರು. ಆರೋಪಿಗಳಿಗೆ ಆಶ್ರಯ ನೀಡಿದ್ದ ಕಾರಣಕ್ಕೆ ಸಿರಾಜ್ನನ್ನು ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ.