ರಾಜ್ಯದ ರೈತರಿಗೆ ಹಲವಾರು ರೀತಿಯಲ್ಲಿ ಮೋಸ ಮಾಡುತ್ತಾ ಬಂದಿರುವ ಖಾಸಗಿ ಕಂಪನಿಗಳು ಈಗ ಬಿತ್ತನೇ ಬೀಜದಲ್ಲು ತನ್ನ ಕೈಚಳಕವನ್ನ ತೋರಿಸಿದ್ದಾರೆ. ಕೃಷಿ ಪ್ರಧಾನ ಜಿಲ್ಲೆಗಳಾದ ಗದಗ, ಹಾವೇರಿಯಲ್ಲಿ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಮಾಡಿರುವುದು ಬೆಳಕಿಗೆ ಬಂದಿದೆ. ಸಾವಿರಾರು ರೂಪಾಯಿ ಕರ್ಚು ಮಾಡಿ ಬಿತ್ತಿದ ಗೋವಿನ ಜೋಳಕ್ಕೆ ಫಲವತ್ತಾದ ತೆನೆ ಬರದೇ ಅನ್ನದಾತನ ಜೀವನ ಮಣ್ಣುಪಾಲಾಗಿದೆ.
6 ತಿಂಗಳು ದುಡಿದ ಮಣ್ಣಿನ ಮಕ್ಕಳ್ಳಿಗೆ ಕಳೆಪೆ ಬೀಜ ನೀಡಿ ಖಾಸಗಿ ಕಂಪನಿ ದೋಖಾ ಮಾಡಿದೆ. ಅಡ್ವಾನ್ಟ್ ಬೀಜದ ಕಂಪನಿ ವಿರುದ್ಧ ಹಾವೇರಿ ರೈತರು ಆರೋಪ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಫಲವತ್ತಾಗಿ ಬೆಳೆ ಇದ್ರು ಫಲವತ್ತಾದ ತೆನೆ ಇಲ್ದೆ ರೈತರು ಕಂಗಾಲಾಗಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾ. ಹರದಗಟ್ಟಿ ಗ್ರಾಮ ಮತ್ತು ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ತಂಡುರು ಗ್ರಾಮದ ನೂರಾರು ರೈತರ ಸಮಸ್ಯೆ ಇದಾಗಿದೆ. ತಿಂಗಳು ಇಡೀ ಬೇವರು ಸುರಿಸಿದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಲಕ್ಷಾಂತರ ರೂಪಾಯಿ ಸಾಲಗೈದು ಬಿತ್ತಿ ಬೆಳೆ ಬೆಳೆದ ರೈತರು ಕಣ್ಣೀರಿಡುತ್ತಿದ್ದಾರೆ. ಫಸಲು ಬಾರದೆ ಇದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎನ್ನುತ್ತಿರುವ ರೈತರು, ನಮಗೆ ನ್ಯಾಯ & ಪರಿಹಾರ ನೀಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.