ರಾಜ್ಯಪಾಲರ ಸೂಚನೆ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಸಚಿವ ಪ್ರಿಯಾಂಕ್ ಖರ್ಗೆಯವರು, ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಬಿಜೆಪಿ, ಜೆಡಿಎಸ್ನದ್ದು ಒಂದು ಸಂವಿಧಾನ. ಕಾಂಗ್ರೆಸ್ಗೊಂದು ಸಂವಿಧಾನ ಎಂದು ವಾಗ್ದಾಳಿ ನಡೆಸಿದ್ದಾರೆ.ನಮ್ಮ ವಿಚಾರದಲ್ಲಿ ಛಲವಾದಿ ನಾರಾಯಣಸ್ವಾಮಿ ಬಿಟ್ಟು ವಿಜಯೇಂದ್ರ, ಅಶೋಕ್ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ದಲಿತರ ನಡುವೆ ಬಡಿದಾಡಿಸುವುದು ಕೋಮುವಾದ ಸೃಷ್ಟಿಸುವುದು, ಇದೆಲ್ಲ RSS, BJP ಸಂಚು. ಬಿಜೆಪಿ-ಜೆಡಿಎಸ್ನವರ ದಾಖಲೆಗಳು ರಾಜ್ಯಪಾಲರ ಟೇಬಲ್ನಲ್ಲಿ ಕೊಳೆಯುತ್ತಿವೆ. ಅದಕ್ಕೇನು ವಿವರಣೆ ಕೇಳಿಲ್ಲ. ಬಿಜೆಪಿ ನಾಯಕರ ಪ್ರಕರಣದಲ್ಲಿ ನನ್ನ ಬಳಿ ಕಡತ ಇಲ್ಲ ಎಂದು ರಾಜ್ಯಪಾಲರು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.