ತರಬೇತಿ ಹಂತದಲ್ಲೇ ತನ್ನ ಖಾಸಗಿ ಆಡಿ ಕಾರಿನ ಮೇಲೆ ಕೆಂಪು ಬಣ್ಣದ ಸೈರನ್ ಅಳವಡಿಸಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪುಣೆಯ ಉಪ ಜಿಲ್ಲಾಧಿಕಾರಿ ಪೂಜಾ ಖೇಡ್ಕ ಅವರನ್ನು ವರ್ಗ ಮಾಡಲಾಗಿದೆ. ಗುತ್ತಿಗೆದಾರರೊಬ್ಬರು ನೀಡಿದ ಕಾರನ್ನು ನಿಯಮಬಾಹಿರವಾಗಿ ಬಳಸುತ್ತಿದ್ದ ಪೂಜಾ, ಅದಕ್ಕೆ ಕೆಂಪು ಸೈರನ್ ಕೂಡಾ ಅಳವಡಿಸಿಕೊಂಡಿದ್ದರು. ಜೊತೆಗೆ ಜಿಲ್ಲಾಧಿಕಾರಿಗೆ ನೀಡುವಂತೆ ತಮಗೂ ತಮ್ಮ ಹೆಸರಿನ ಲೆಟರ್ ಹೆಡ್, ನಾಮಫಲಕ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುವಂತೆ ಕಂದಾಯ ಸಹಾಯಕರಿಗೆ ಒತ್ತಾಯ ಮಾಡಿದ್ದರು. ಈ ಆರೋಪದಡಿ ಪೂಜಾ ಅವರನ್ನು ವಾಶಿಮ್ಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.