ಹಲವು ಬಾರಿ ನಾವು ಕೆಲಸ ಮಾಡುವ ಸ್ಥಳದಲ್ಲಿ ಗೌರವ ಸಿಗದಿದ್ದರೂ, ಕೆಲಸದಲ್ಲಿ ಅತೃಪ್ತಿ ಇದ್ದರೂ ಮುಂದಿನ ಭವಿಷ್ಯ ಅಥವಾ ಆರ್ಥಿಕ ಕಾರಣದಿಂದಾಗಿ ಅಲ್ಲೆ ಉಳಿದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಯುವಕ ತನಗಿಷ್ಟವಿಲ್ಲದ ಕೆಲಸವನ್ನು ಬಿಟ್ಟ ಬಳಿಕ ಬಾಸ್ ಎದುರೇ ಡೋಲು ಬಡಿಯುತ್ತಾ ನೃತ್ಯ ಮಾಡಿ, ತನಗೆ ತಾನೇ ಬೀಳ್ಕೊಡುಗೆ ಮಾಡಿಕೊಂಡು ಹೊರಟ ಘಟನೆ ಪುಣೆಯಲ್ಲಿ ನಡೆದಿದೆ.
ಅನಿಕೇತ್ ಎಂಬಾತ ಮೂರು ವರ್ಷಗಳಿಂದ ಕಂಪನಿವೊಂದರಲ್ಲಿ ಸೇಲ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ. ಕಂಪನಿ ನೀಡುತ್ತಿದ್ದ ವೇತನದಲ್ಲಿ ಹೆಚ್ಚಳವಿಲ್ಲದೆ ನಿರಾಸೆಗೊಂಡಿದ್ದ. ಕೊನೆಗೆ ಕೆಲಸ ಬಿಟ್ಟಿದ್ದು, ಕೆಲಸದ ಕೊನೆಯ ದಿನ ಸ್ನೇಹಿತರೊಂದಿಗೆ ಡೋಲು ಬಾರಿಸುತ್ತಾ ಬಾಸ್ ಎದುರು ನೃತ್ಯ ಮಾಡಿದ್ದಾರೆ. ಕೊನೆಗೆ ಬಾಸ್ ಅವರನ್ನು ಹೊರಹೋಗುವಂತೆ ಹೇಳಿದ್ದಾರೆ.