- ಎರಡು ಗೂಡ್ಸ್ ರೈಲುಗಳುಮುಖಾಮುಖಿ ಡಿಕ್ಕಿ
- ಪಂಜಾಬ್ನ ಸಿರ್ಹಿಂದ್ನ ಮಾಧೋಪುರ ಬಳಿ ಘಟನೆ ನಡೆದಿದೆ
ಎರಡು ಗೂಡ್ಸ್ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಲೋಕೋ ಪೈಲಟ್ಗಳು ಗಾಯಗೊಂಡಿದ್ದು, ಪಂಜಾಬ್ನ ಸಿರ್ಹಿಂದ್ನ ಮಾಧೋಪುರ ಬಳಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಗಾಯಗೊಂಡ ಪೈಲೆಟ್ಗಳನನು ಶ್ರೀ ಫತೇಘರ್ ಸಾಹಿಬ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅವಘಡದಲ್ಲಿ ಗೂಡ್ಸ್ ರೈಲಿನ ಇಂಜಿನ್ ಪಲ್ಟಿಯಾಗಿದ್ದು, ಪ್ಯಾಸೆಂಜರ್ ರೈಲು ಕೂಡ ಅದರಲ್ಲಿ ಸಿಲುಕಿಕೊಂಡಿದೆ. ಅಪಘಾತದಲ್ಲಿ ಗಾಯಗೊಂಡ ಪೈಲಟ್ಗಳಾದ ಉತ್ತರಪ್ರದೇಶದ ಸಹರಾನ್ಪುರದ ವಿಕಾಸ್ ಕುಮಾರ್ (37) ಮತ್ತು ಹಿಮಾಂಶು ಕುಮಾರ್ (31) ಎಂದು ಗುರುತಿಸಲಾಗಿದೆ. ಸಿವಿಲ್ ಆಸ್ಪತ್ರೆಗೆ ಫತೇಘರ್ ಸಾಹಿಬ್ಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕಲ್ಲಿದ್ದಲು ತುಂಬಿದ ಎರಡು ವಾಹನಗಳು ಇಲ್ಲಿ ನಿಂತಿದ್ದವು. ಒಂದು ಗೂಡ್ಸ್ ರೈಲಿನ ಎಂಜಿನ್ ಸಡಿಲಗೊಂಡು ಇನ್ನೊಂದಕ್ಕೆ ಡಿಕ್ಕಿ ಹೊಡೆದು ನಂತರ ಎಂಜಿನ್ ಪಲ್ಟಿಯಾಗಿ ಅಂಬಾಲಾದಿಂದ ಜಮ್ಮು ತಾವಿಗೆ ಹೋಗುತ್ತಿದ್ದ ಬೇಸಿಗೆ ವಿಶೇಷ ಪ್ಯಾಸೆಂಜರ್ ರೈಲು ಸಿಲುಕಿಕೊಂಡಿತ್ತು.