ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಹೈದರಾಬಾದ್ನಲ್ಲಿ ‘ಪುಷ್ಪ 2’ ಸಿನಿಮಾ ನೋಡುವಾಗ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಈರ್ವ ಮಹಿಳೆ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದೆ ಎಂದು ಅಲ್ಲಿ ಅರ್ಜುನ್ ಹೇಳಿದ್ದಾರೆ. ಈ ಘಟನೆಯಲ್ಲಿ ತಮ್ಮ ಪಾತ್ರವನ್ನು ಸ್ಪಷ್ಟಪಡಿಸಿ, ಇದು ಅನಿರೀಕ್ಷಿತ ಅಷ್ಟೆಎಂದು ಹೇಳಿದ್ದಾರೆ.
ಅಲ್ಲು ಅರ್ಜುನ್ ‘ಪುಷ್ಪ 2’ ಸಿನಿಮಾ ವೀಕ್ಷಿಸಲು ಹೈದರಾಬಾದ್ನ ಸಂಧ್ಯಾ ಥಿಯೇಟರ್ ಹೋಗಿದ್ದರು. ಈ ವೇಳೆ ನಡೆದ ಕಾಲ್ತುಳಿತ ಉಂಟಾಗಿತ್ತು. ಒಬ್ಬ ಮಹಿಳೆ ಮೃತ ಪಟ್ಟಿದ್ದರು. ಅಲ್ಲು ಅರ್ಜುನ್ ಅವರು ಈ ಪ್ರಕರಣದಲ್ಲಿ ಅರೆಸ್ಟ್ ಕೂಡ ಆಗಿದ್ದರು. ಈ ಬಂಧನದ ಹಿಂದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಭಾವ ಇದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅಲ್ಲು ಅರ್ಜುನ್ ಅವರು ತಳ್ಳಿಹಾಕಿದ್ದಾರೆ.
‘ಇಲ್ಲಿ ಯಾರದ್ದೂ ತಪ್ಪಿಲ್ಲ. ಇದೊಂದು ಅಪಘಾತ. ಎಲ್ಲರೂ ಒಳ್ಳೆಯ ವಿಚಾರಕ್ಕೆ ಸಿನಿಮಾ ನೋಡಲು ಸೇರಿದ್ದರು. ಈ ಘಟನೆ ಯಾರ ನಿಯಂತ್ರಣದಲ್ಲೂ ಇರಲಿಲ್ಲ. ನಾನು ಮೃತ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ರೇವತಿ ಅವರ ಮಗ ಬೇಗ ಚೇತರಿಕೆ ಕಾಣಲಿ ಎಂದು ಕೋರಿಕೊಳ್ಳುತ್ತೇನೆ. ನಾನು ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ಪಡೆಯುತ್ತಿದ್ದೇನೆ’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
‘ಜನರನ್ನು ಮನರಂಜಿಸಬೇಕು ಎಂಬುದು ಉದ್ದೇಶ ನನ್ನದು. ಥಿಯೇಟರ್ ಸಿನಿಮಾದವರಿಗೆ ದೇವಸ್ಥಾನ ಇದ್ದ ಹಾಗೆ. ದೇವಸ್ಥಾನದಲ್ಲಿ ಏನಾದರೂ ಆದರೆ, ನನಗಿಂತ ಹೆಚ್ಚು ಇನ್ಯಾರಿಗೆ ಬೇಸರ ಆಗಲು ಸಾಧ್ಯ ಹೇಳಿ? 2 ದಶಕಗಳಲ್ಲಿ ಗಳಿಸಿದ ಗೌರವವನ್ನು ಒಂದು ದಿನ ನಾಶ ಆಗುತ್ತದೆ ಎಂದರೆ ಅದು ಸಾಕಷ್ಟು ಬೇಸರದ ಸಂಗತಿ‘ ಎಂದು ತೀವ್ರವಾಗಿ ಬೇಸರ ತೊಡಿಕೊಂಡಿದ್ದಾರೆ.
‘ಹಲವು ವದಂತಿಗಳು ಹಬ್ಬುತ್ತಿವೆ. ನಾನು ಯಾವ ರಾಜಕಾರಣಿಯನ್ನೂ, ಸರ್ಕಾರವನ್ನೂ ದೂರುವುದಿಲ್ಲ. ಸಾಕಷ್ಟು ವದಂತಿ ಹಬ್ಬಿಸಲಾಗುತ್ತಿದೆ. ನನ್ನ ಚಾರಿತ್ಯ ಹರಣ ಆಗುತ್ತಿದೆ. ನಾನು ಎಲ್ಲಾ ಸೆಲಬ್ರೇಷನ್ನ ರದ್ದು ಮಾಡಿದ್ದೇನೆ. ಮೂರು ವರ್ಷ ಕಷ್ಟಪಟ್ಟು ಮಾಡಿದ ಸಿನಿಮಾ ಹೇಗಿದೆ ಎಂಬುದನ್ನು ಕೂಡ ನಾನು ನೋಡುತ್ತಿಲ್ಲ. ಮನೆಯಲ್ಲಿ ಒಬ್ಬನೇ ಕೂರುತ್ತಿದ್ದೇನೆ. ನಾನು ಇದಕ್ಕೆ ನೇರ ಕಾರಣ ಅಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ’ ಎಂದು ಅಲ್ಲು ಅರ್ಜುನ್ ಭಾವುಕರಾಗಿದ್ದಾರೆ.
‘ತೆಲುಗು ಚಿತ್ರರಂಗವನ್ನು ಮೇಲಕ್ಕೆ ತೆಗೆದುಕೊಂಡು ಹೋಗಬೇಕು ಎಂದುಕೊಂಡವನು ನಾನು. ಮೂರು ವರ್ಷ ಮಾಡಿದ ಕೆಲಸ ಹೇಗಿದೆ ನೋಡಲು ಹೋಗಿದ್ದವನು ನಾನು. ನಾನು ಒಪ್ಪಿಗೆ ಇಲ್ಲದೆ ಹೋಗಿದ್ದೇನೆ ಎಂಬುದೆಲ್ಲ ಸುಳ್ಳು. ಅಲ್ಲಿ ಪೋಲಿಸರು ಇದ್ದರು. ಒಪ್ಪಿಗೆ ಇಲ್ಲ ಎಂದಿದ್ದರೆ ಅವರೇ ಹೇಳುತ್ತಿದ್ದರು. ಹೀಗಾಗಿ, ನಾನು ಒಪ್ಪಿಗೆ ಪಡೆದಿದ್ದೇನೆ ಎಂಬುದು ಸ್ಪಷ್ಟವಾಗಿದೆ. ಅಲ್ಲಿ ರೋಡ್ಶೋ ಆಗಿದೆ ಎಂಬುದು ಸುಳ್ಳು. ಕೈ ಬೀಸಿದರೆ ಫ್ಯಾನ್ಸ್ ಖುಷಿಪಡುತ್ತಾರೆ. ಹಾಗಾಗಿ ನಾನು ಕೈ ಬೀಸಿದೆ. ಎಲ್ಲ ಹೀರೋಗಳು ಅದನ್ನೇ ಮಾಡುತ್ತಾರೆ ಅದರಲ್ಲಿ ವಿಶೇಷ ಏನೂ ಇಲ್ಲಾ ಎಂದು ಹೇಳಿದ್ದಾರೆ.
‘ಹೊರಗೆ ಸಾಕಷ್ಟು ಜನ ಸೇರುತ್ತಿದ್ದಾರೆ ದಯವಿಟ್ಟು ಹೊರಡಿ ಎಂದು ಪೊಲೀಸರು ಹೇಳಿದರು. ನಾನು ಆ ಕ್ಷಣವೇ ಮನೆಗೆ ನಡೆದೆ. ಮರುದಿನವೇ ಸಾವಿನ ವಿಚಾರ ತಿಳಿಯಿತು. ನನಗೆ ಶಾಕ್ ಆಯಿತು. ನನಗೆ ಆ ವಿಚಾರ ಗೊತ್ತಾಗಿದ್ದರೆ ನಾನು ಸಿನಿಮಾ ನೋಡ್ತಾನೇ ಇರಲಿಲ್ಲ. ನಾನು ನನ್ನ ಆಪ್ತರಿಗೆ ಕರೆ ಮಾಡಿ ಏನೆಂದು ವಿಚಾರಿಸಿಕೊಳ್ಳಿ ಎಂದು ಹೇಳಿದೆ. ಅದೇ ದಿನ ಆಸ್ಪತ್ರೆಗೆ ತೆರಳಲು ನಿರ್ಧರಿಸಿದ್ದೆ. ಆದರೆ, ಬೇಡ ಎಂದರು’ ಕಾಲ್ತುಳಿತ ಪ್ರಕರಣದ ಬಗ್ಗೆ ಅಲ್ಲು ಅರ್ಜುನ್ ಸ್ಪಷ್ಟನೆ ಕೊಟ್ಟಿದ್ದಾರೆ.