ಹೈದ್ರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಭೀಕರ ಕಾಲ್ತುಳಿದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಅವರ ಪುತ್ರನೂ ಕೂಡ ಕಾಲ್ತುಳಿತಕ್ಕೆ ಸಿಲುಕಿ ಪರಿಸ್ಥಿತಿ ಗಂಭೀರವಾಗಿತ್ತು. ಈಗ ಆ ಎಂಟು ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಹೈದ್ರಾಬಾದ್ನ ಕಿಮ್ಸ್ ಆಸ್ಪತ್ರೆಯೂ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಎಂಟು ವರ್ಷದ ಬಾಲಕ ಶ್ರೀತೇಜನನ್ನು ಸದ್ಯ ಇನ್ಸೆಂಟೀವ್ ಕೇರ್ನಲ್ಲಿ ಇಡಲಾಗಿದೆ ನ್ಯೂರಾಲಜಿಕಲ್ ಸಮಸ್ಯೆಗಳು ಸುಧಾರಿಸಿವೆ. ಆದ್ರೆ ಬಾಲಕನನ್ನು ಈಗಲೂ ವೆಂಟಿಲೇಟರ್ ಮೇಲೆಯೇ ಇಡಲಾಗಿದೆ ಎಂದು ಹೇಳಲಾಗುತ್ತಿದೆ.
ವೈದ್ಯರು ಹೇಳುವ ಪ್ರಕಾರ ಬಾಲಕನು ಆಕ್ಸಿಜನ್ ಪೈಪ್ ಮೂಲಕ ಉಸಿರಾಡುತ್ತಿದ್ದಾರೆ. ಸದ್ಯ ವೆಂಟಿಲೇಟರ್ನ್ನು ಅಳವಡಿಸಲಾಗಿದೆ. ಜ್ವರವು ನಿಧಾನಕ್ಕೆ ಕಡಿಮೆ ಆಗುತ್ತಿದೆ. ವಿಟಲ್ ಪ್ಯಾರಾಮೀಟರ್ ಸ್ಟೇಬಲ್ ಆಗಿದ್ದು. ನೀಡುತ್ತಿರುವ ಚಿಕಿತ್ಸೆಗೆ ಸದ್ಯ ಸ್ಪಂದಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಆಸ್ಪತ್ರೆ ನೀಡಿರುವ ವರದಿ ಪ್ರಕಾರ ಡಿಸೆಂಬರ್ 4 ರಂದು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಉಸಿರಾಟದ ಪ್ರಕ್ರಿಯೆ ಸಾಮಾನ್ಯವಾಗಿ ಇರಲಿಲ್ಲ. ಹೀಗಾಗಿ ಬ್ರಿಥೀಂಗ್ ಸಪೋರ್ಟ್ ನೀಡಬೇಕಾಯ್ತು. ಬಳಿಕ ಡಿಸೆಂಬರ್ 10 ರಂದು ಅದನ್ನು ತೆಗೆಯಲಾಯ್ತು. ಮರಳಿ ಸಮಸ್ಯೆಗಳು ಶುರುವಾದಾಗ ಮತ್ತೆ ಡಿಸೆಂಬರ್ 12 ರಂದು ಬ್ರಿಥೀಂಗ್ ಸಪೋರ್ಟ್ ನೀಡಬೇಕಾಯ್ತು ಎಂದು ಹೇಳಿದ್ದಾರೆ.
ಇನ್ನು ಹೈದ್ರಾಬಾದ್ನ ಪೊಲೀಸ್ ಕಮಿಷನರ್ ಸಿ.ವಿ. ಆನಂದ ಆಸ್ಪತ್ರೆಗೆ ಭೇಟಿ ನೀಡಿದ್ದು. ಕಾಲ್ತುಳಿತದಲ್ಲಿ ಉಸಿರಾಟದ ತೊಂದರೆಯಾಗಿದ್ದರಿಂದ ಬಾಲಕನ ಮೆದುಳು ನಿಷ್ಕ್ರಿಯಗೊಂಡಿತ್ತು. ಇಂತಹ ಸಮಸ್ಯೆಗಳಿಂದ ಹೊರಬರಲು ಸ್ವಲ್ಪ ಕಾಲ ಹಿಡಿಯುತ್ತದೆ ಎಂದು ಹೇಳಿದ್ದಾರೆ. ಇದೇ ಡಿಸೆಂಬರ್ 4 ರಂದು ಹೈದ್ರಾಬಾದ್ನ ಸಂಧ್ಯಾ ಥಿಯೇಟರ್ಗೆ ರೇವತಿ, ಅವರ ಪತಿ, ಮಗಳು ಹಾಗೂ ಮಗ ಪುಷ್ಪಾ-2 ಮೂವಿ ನೋಡಲು ಬಂದಿದ್ದರು. ಈ ವೇಳೆ ಚಿತ್ರದ ನಾಯಕ ಅಲ್ಲು ಅರ್ಜುನ್ ಪ್ರಿಮೀಯರ್ ಶೋ ನೋಡಲು ಥಿಯೇಟರ್ಗೆ ಬಂದ ಕಾರಣ ದೊಡ್ಡ ಮಟ್ಟದ ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ರೇವತಿ ಹಾಗೂ ಅವರ ಎಂಟು ವರ್ಷದ ಮಗ ಶ್ರೀತೇಜ ಕಾಲ್ತುಳಿತಕ್ಕೆ ಸಿಲುಕಿದರು. ಪರಿಣಾಮ ಸ್ಥಳದಲ್ಲಿಯೇ ರೇವತಿ ಅಸುನೀಗಿದರೆ ಬಾಲಕನ ಪರಿಸ್ಥಿತಿಯೂ ಕೂಡ ಗಂಭೀರವಾಗಿತ್ತು. ಕುಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಘಟನೆ ನಡೆದು 14 ದಿನಗಳಾದರೂ ಕೂಡ ಬಾಲಕನ ಪರಿಸ್ಥಿತಿ ಇನ್ನೂ ಕೂಡ ಚಿಂತಾಜನಕವಾಗಿದೆ.