ಬಿಜೆಪಿ ರಾಜ್ಯಸಭಾ ಸಂಸದೆ ಎಸ್ ಫಾಂಗ್ಲಾನ್ ಕೊನ್ಯಾಕ್ ಅವರು ಇಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರಿಗೆ ಪತ್ರ ಬರೆದಿದ್ದು, ವಿಪಕ್ಷ ನಾಯಕ ರಾಹುಲ್ ಗಾಂಧಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಫಾಂಗ್ರಾನ್ ಕೊನ್ಯಾಕ್, ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಕಾಂಗ್ರೆಸ್ ಬಿಜೆಪಿ ಪ್ರತಿಭಟನೆಯ ವೇಳೆ ತೀರಾ ಹತ್ತಿರ ಬಂದು ನನಗೆ ಮುಜುಗರಕ್ಕೀಡು ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಈ ವರ್ತನೆ ನನಗೆ ಇಷ್ಟವಾಗಲಿಲ್ಲ. ಮತ್ತು ಅವರು ಹತ್ತಿರ ಬಂದು ಕೂಗಾಡಲು ಪ್ರಾರಂಭಿಸಿದ್ದರು. ಆ ಸಂದರ್ಭ ಏನೇ ನಡೆದಿದ್ದರೂ ತುಂಬಾ ಕೆಟ್ಟದಾಗಿತ್ತು. ಆ ರೀತಿಯಾಗಿ ನಡೆಯಬಾರದಾಗಿತ್ತು. ನಾನು ರಾಹುಲ್ ಗಾಂಧಿ ಅವರ ನಡೆತೆಯನ್ನು ಖಡಿಸುತ್ತೇನೆ. ಈ ಘಟನೆಯ ಬಗ್ಗೆ ರಾಜ್ಯಸಭಾ ಅಧ್ಯಕ್ಷರಿಗೂ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರಿಗೆ ಬರೆದ ಪತ್ರದಲ್ಲಿ, ನಾನು ಕೈಯಲ್ಲಿ ಫಲಕದೊಂದಿಗೆ ಮಕರ ದ್ವಾರದ ಮೆಟ್ಟಿಲುಗಳ ಕೆಳಗೆ ನಿಂತಿದ್ದೆ. ಅಲ್ಲಿಗೆ ಭದ್ರತಾ ಸಿಬ್ಬಂದಿ ಸುತ್ತುವರಿದು ಪ್ರವೇಶದ್ವಾರಕ್ಕೆ ದಾರಿಯನ್ನ ರಚಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ರಾಹುಲ್ ಗಾಂಧಿ ಅವರು ಬೇರೆ ಪಕ್ಷದ ಸದಸ್ಯರೊಂದಿಗೆ ನನ್ನ ಮುಂದೆ ಬಂದು ಅನುಚಿತವಾಗಿ ವರ್ತಿಸಿದರು. ಗಟ್ಟಿಯಾದ ಧ್ವನಿಯಲ್ಲಿ ಕೂಗಿದ್ದರು. ಅವರು ನನಗೆ ತೀರಾ ಹತ್ತಿರ ಬಂದು ನನಗೆ ಮುಜುಗರವಾಗುವಂತೆ ಮಾಡಿದ್ದಾರೆ. ನಾನು ಒಬ್ಬ ಮಹಿಳಾ ಸದಸ್ಯೆಯಾಗಿ, ಭಾರವಾದ ಹೃದಯದಿಂದ ಅಲ್ಲಿಂದ ದೂರ ಸರಿದಿದ್ದೇನೆ. ನನ್ನ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಖಂಡಿಸಿದೆ ಆದರೆ ಯಾವುದೇ ಸಂಸತ್ತಿನ ಸದಸ್ಯರು ಈ ರೀತಿ ವರ್ತಿಸಬಾರದಿತ್ತು ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ನಾಗಾಲ್ಯಾಂಡ್ನ ಎಸ್ಟಿ ಸಮುದಾಯಕ್ಕೆ ಸೇರಿದವಳಾಗಿದ್ದು, ನನ್ನ ಘನತೆ ಮತ್ತು ಸ್ವಾಭಿಮಾನವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಳವಾಗಿ ಫಾಸಿಗೊಳಿಸಿದ್ದಾರೆ. ಆದ್ದರಿಂದ ಗೌರವಾನ್ವಿತ ಅಧ್ಯಕ್ಷರೇ, ನಾನು ನಿಮ್ಮ ರಕ್ಷಣೆ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.