ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಶಾಸಕ ಬಸನಗೌಡ ದದ್ದಲ ಅವರ ಮಾಜಿ ಪಿಎ ಪಂಪಣ್ಣನನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹೌದು ರಾಯಚೂರಿನಲ್ಲಿ ನಿನ್ನೆ ಇಡಿ ಅಧಿಕಾರಿಗಳು ಬಸನಗೌಡ ದದ್ದಲ ಹಾಗೂ ಅವರ ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದರು. ಸುಮಾರು 24 ಗಂಟೆಗಳ ಕಾಲ ನಡೆದ ವಿಚಾರಣೆ ಬಳಿಕ ಇಡಿ ಅಧಿಕಾರಿಗಳು ಪಂಪಣ್ಣರನ್ನು ವಶಕ್ಕೆ ಪಡೆದುಕೊಂಡು, ರಾಯಚೂರಿನಲ್ಲಿರುವ ಬಸನಗೌಡ ದದ್ದಲ ಮನೆಗೆ ಕರೆತಂದಿದ್ದಾರೆ. ಬಸನಗೌಡ ದದ್ದಲ ಹಾಗೂ ಪಂಪಣ್ಣ ನಡುವೆ 55 ಲಕ್ಷ ರೂ ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಇದೀಗ ಪಂಪಣ್ಣ ಅವರನ್ನು ಬಸನಗೌಡ ದದ್ದಲ ಮನೆಗೆ ಕರೆತಂದು ಮತಷ್ಟು ವಿಚಾರಣೆಗೆ ಒಳಪಡಿಸಲಾಗಿದೆ.