ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಕರ್ನಾಟಕದ ಮೇಲೂ ಭಾರಿ ಪರಿಣಾಮ ಬೀಳುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ನಲ್ಲೂ ಮಳೆಯಾಗಲಿದೆ. ಕದ್ರಾ, ಕುಂದಾಪುರ, ಮುಂಡಗೋಡು, ಹಿರೇಕೆರೂರು, ಹೊನ್ನಾಳಿ, ಕಾರವಾರ, ಶಿವಮೊಗ್ಗ, ಚಿತ್ರದುರ್ಗ, ಆನವಟ್ಟಿಯಲ್ಲಿ ಮಳೆಯಾಗಿದೆ. ಕಿರವತ್ತಿ, ಹೊನ್ನಾವರ, ಹುಂಚದಕಟ್ಟೆ, ಶ್ರವಣಬೆಳಗೊಳ, ದಾವಣಗೆರೆ, ಕುಣಿಗಲ್, ಕೃಷಗಣರಾಜಸಾಗರ, ಬನವಾಸಿ, ಜಯಪುರ, ಶ್ರೀರಂಗಪಟ್ಟಣ, ತರೀಕೆರೆ, ನಾಯಕನಹಟ್ಟಿ, ಎನ್ಆರ್ಪುರ, ತರೀಕೆರೆ, ಗೇರುಸೊಪ್ಪ, ಗೋಕರ್ಣದಲ್ಲಿ ಮಳೆಯಾಗಿದೆ.