ಬೆಂಗಳೂರು: ಇನ್ನೇನು ಮಳೆ ಕಡಿಮೆ ಆಯ್ತು ಅಂತ ಜನರು ಭಾವಿಸುತ್ತಿರುವ ವೇಳೆ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ.
ಇದನ್ನು ಓದಿ: ತಮಿಳು ಚಿತ್ರರಂಗದ ಖ್ಯಾತ ನಟ ಡೆಲ್ಲಿ ಗಣೇಶ್ ಇನ್ನಿಲ್ಲ
ನವೆಂಬರ್ 19ರ ವರೆಗಿನ ಎನ್ವಿರಾನ್ಮೆಂಟಲ್ ಕಂಪ್ಲಿಯನ್ಸ್ ಮಾನಿಟರಿಂಗ್ ECM ಸಂಚಯನ ಚಾರ್ಟ್ ಗಮನಿಸುವುದಾದರೆ, ಬೆಂಗಳೂರಿನಲ್ಲಿ 30 ಮಿಮೀ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕೊಡಗು, ದಕ್ಷಿಣ ಕನ್ನಡ, ಉಡುಪಿ ಘಟ್ಟಗಳು, ಚಿಕ್ಕಮಗಳೂರು ಪ್ರದೇಶಗಳಲ್ಲಿ 70ಮಿಮೀ ಮಳೆಯಾಗುವ ನಿರೀಕ್ಷೆ ಇದ್ದು, ಕರ್ನಾಟಕ ದಕ್ಷಿಣ ಒಳ ನಾಡಿನ ಪ್ರದೇಶಗಳಲ್ಲಿ 25-30mm ಮಳೆ ಬೀಳುವ ನಿರೀಕ್ಷೆ ಇದೆ.
ಇದನ್ನು ಓದಿ: BBK 11: ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗುವವರು ಯಾರು?
ಬೆಂಗಳೂರಿನಲ್ಲಿ ಇಲ್ಲಿಯವರೆಗೆ ನವೆಂಬರ್ನಲ್ಲಿ ಈಶಾನ್ಯ ಮಾನ್ಸೂನ್ ಮಳೆ ಶಾಂತವಾಗಿದ್ದು, ತಿಂಗಳಿಗೆ ಸಾಮಾನ್ಯವಾಗಿ 60ಮಿಮೀ ಮಳೆಯಾಗುತ್ತಿತ್ತು. ಈ ತಿಂಗಳು ನಿರೀಕ್ಷಿತ ಮಳೆಯನ್ನು ಸ್ವೀಕರಿಸುವ ನಿರೀಕ್ಷೆಯನ್ನು ಮಾಡಲಾಗಿದೆ. ದುರ್ಬಲ ಪರಿಚಲನೆಯು ಮುಂದಿನ ವಾರ ತಮಿಳುನಾಡಿನ ಕರಾವಳಿಯ ಸಮೀಪಕ್ಕೆ ಬಂದು ತಮಿಳುನಾಡಿನ ದಕ್ಷಿಣ ಭಾಗವನ್ನು ದಾಟುವ ನಿರೀಕ್ಷೆಯಿದೆ. ಇನ್ನು, ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಒಣಹವೆ ಇತ್ತು, ಆದರೆ ಚಂಡಮಾರುತ ಪರಿಚಲನೆಯಿಂದಾಗಿ ಕರಾವಳಿ ರಾಜ್ಯಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.