- ರೆಮಲ್ ಚಂಡಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಭಾರೀ ಮಳೆ
- ಮಳೆಯಿಂದಾಗಿ ಬಾಂಗ್ಲಾದಲ್ಲಿ ಇಬ್ಬರು ಹಾಗೂ ಕೋಲ್ಕತ್ತಾದಲ್ಲಿ ಓರ್ವ ವ್ಯಕ್ತಿ ಸಾವು
ರೆಮಲ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಭೀಕರ ಗಾಳಿ, ಮಳೆ ಬೀಳುತ್ತಿದ್ದರಿಂದ ಬಾಂಗ್ಲಾದಲ್ಲಿ ಇಬ್ಬರು ಹಾಗೂ ಕೋಲ್ಕತ್ತಾದಲ್ಲಿ ಓರ್ವ ವ್ಯಕ್ತಿ ಸಾನ್ನಪ್ಪಿದ್ದಾನೆ.
ರೆಮಲ್ ಚಂಡಮಾರುತದಿಂದ ಕೋಲ್ಕತ್ತಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಗರದ ಸುತ್ತಮುತ್ತ ರಸ್ತೆಗಳೆಲ್ಲ ಜಲಾವೃತವಾಗಿದ್ದು, ಆಟೋ, ಬೈಕ್, ಕಾರು ವಾಹನಗಳು ನೀರಿನಲ್ಲೇ ಓಡಾಡುತ್ತಿವೆ. ರೆಮಲ್ ಚಂಡಮಾರುತದ ಹೊಡೆತದಿಂದ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಹಲವು ಕಡೆ ಭೂ ಕುಸಿತ ಉಂಟಾಗಿದೆ. ಹೀಗಾಗಿ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಾದ್ಯಂತ ವಿಪತ್ತು ನಿರ್ವಹಣಾ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳನ್ನು ಹೈ ಅಲರ್ಟ್ ಆಗಿರುವಂತೆ ಕೇಂದ್ರ ಸೂಚನೆ ನೀಡಿದೆ.